ಮಡಿಕೇರಿ ಜೂ.14 : ತಾಲೂಕಿನ ಸಂಪಾಜೆ ಹೋಬಳಿ ಮದೆ ಗ್ರಾಮದ ಸರ್ವೇ ನಂಬರ್ 98/1ಪಿ1ರ 1.50 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನಿವೇಶನ ಉದ್ದೇಶಕ್ಕೆ ಹಾಗೂ ಕಾಟಕೇರಿ ಗ್ರಾಮದ ಸರ್ವೇ ನಂಬರ್ 115/1ರ 1.50 ಎಕರೆ ಜಾಗವನ್ನು ನಿವೇಶನ ಉದ್ದೇಶಕ್ಕೆ ಮಡಿಕೇರಿ ತಾ.ಪಂ.ಇಒ ಅವರ ಹೆಸರಿಗೆ ಜಾಗ ಕಾಯ್ದಿರಿಸಿ ಆದೇಶಿಸಿ ಮದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.









