ಮಡಿಕೇರಿ ಜೂ.17 : ‘ಹರ್ ಆಂಗನ್ ಯೋಗ’ ಎನ್ನುವ ಷೋಷ ವಾಕ್ಯದೊಂದಿಗೆ ಜೂ.21 ರಂದು ಮಡಿಕೇರಿಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಸಾವಿರಕ್ಕೂ ಹೆಚ್ಚಿನ ಯೋಗ ಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾ ದೇವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೆಳಗಿನ ಗೌಡ ಸಮಾಜದ ಸಭಾಂಗಣದಲ್ಲಿ ಬೆಳಗ್ಗೆ 6.30 ಗಂಟೆಗೆ ಯೋಗಪಟುಗಳು ಸಮಾವೇಶಗೊಳ್ಳಲಿದ್ದು, 7 ಗಂಟೆಗೆ ‘ಯೋಗ ದಿನಾಚರಣೆ’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಡಾ.ಮಂಥರ್ ಗೌಡ ವಹಿಸಲಿದ್ದಾರೆ ಎಂದರು.
ಯೋಗ ದಿನದ ಆಸನಗಳು : ಯೋಗ ದಿನಾಚರಣೆಯಂದು ತಾಡಾಸನ, ವೃಕ್ಷಾಸನ, ತ್ರಿಕೋನಾಸನ, ವೀರಭದ್ರಾಸನ, ವಜ್ರಾಸನ, ಪಶ್ಚಿಮೋತ್ತಾಸನ, ಉಷ್ಟ್ರಾಸನ, ವಜ್ರಾಸನ, ಮಕರಾಸನ, ಭುಜಂಗಾಸನ, ಏಕಪಾದ ಶಲಭಾಸನ, ಧನುರಾಸನ, ಅರ್ಧ ಹಲಾಸನ, ಸೇತು ಬಂಧಾಸನ ಪವನ ಮುಕ್ತಾಸನ, ಶವಾಸನ, ಕಪಾಲಭಾತಿ ಆಸನಗಳು ಹಾಗೂ ಪ್ರಾಣಾಯಾಮವನ್ನು ಯೋಗ ಪಟುಗಳು ಪ್ರದರ್ಶಿಸಲಿದ್ದಾರೆ.
ಗ್ರಾಮ ಗ್ರಾಮಗಳಲ್ಲಿ ಯೋಗ : ಆಯುಷ್ ಇಲಾಖೆಯಡಿ ಜಿಲ್ಲೆಯ ವಿವಿಧೆಡೆ 7 ಆಯುಷ್ ವೆಲ್‍ನೆಸ್ ಕೇಂದ್ರಗಳಿದ್ದು, ಇವುಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯ್ತಿಗಳ ಮೂಲಕ ಯೋಗ ದಿನದ ಆಚರಣೆ ನಡೆಯಲಿದೆ. ಪ್ರಮುಖವಾಗಿ ಹಳ್ಳಿ ಹಳ್ಳಿಗಳಲ್ಲಿಯೂ ಯೋಗ ಪ್ರಸರಣದ ಕಾರ್ಯ ಕಳೆದ ಒಂದು ತಿಂಗಳಿನಿಂದ ಪ್ರಗತಿಯಲ್ಲಿದೆ ಎಂದು ಡಾ.ರೇಣುಕಾ ದೇವಿ ತಿಳಿಸಿದರು.
ಆಯುರ್ವೇದಿಕ ವೈದ್ಯರ ಸಂಘಟನೆ ನೀಮಾದ ಅಧ್ಯಕ್ಷ ಡಾ.ರಾಜಾರಾಂ ಮಾತನಾಡಿ, ನಗರದ 23 ವಾರ್ಡ್‍ಗಳಲ್ಲಿ ನಗರಸಭಾ ಸದಸ್ಯರ ಸಹಕಾರದೊಂದಿಗೆ ಆಯಾ ವಾರ್ಡ್‍ನ ಆಸಕ್ತರನ್ನು ಒಳಗೊಂಡಂತೆ ಯೋಗ ದಿನ ಆಚರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
::: ‘ಯೋಗ ಸೆಲ್ಫಿ ಸ್ಪರ್ಧೆ’ ::: ಆರೋಗ್ಯಯುತವಾದ ಬದುಕಿಗಾಗಿ ಪ್ರತಿಯೊಬ್ಬರೂ ಯೋಗವನ್ನು ಅಭ್ಯಸಿಸುವಂತೆ ಪ್ರೇರೇಪಣೆ ನೀಡಲು ‘ಯೋಗ ಸೆಲ್ಫಿ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಡಿ ಜೂ.21ರ ಯೋಗ ದಿನಾಚರಣೆಗೂ ಮುನ್ನ ತಮ್ಮ ಮನೆಗಳಲ್ಲಿ ಯೋಗಭ್ಯಾಸ ಮಾಡುವ ಸೆಲ್ಫಿಗಳನ್ನು ತೆಗೆದು ವಾಟ್ಸ್ ಅಪ್ ಸಂಖ್ಯೆ 9886266120 ಗೆ ಕಳುಹಿಸಿಕೊಡಬೇಕೆಂದು ತಿಳಿಸಿದ ಡಾ.ರಾಜಾರಾಂ, ಇದರ ಬಹುಮಾನಗಳನ್ನು ಯೋಗ ದಿನದ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯುಷ್ ಇಲಾಖೆಯ ನ್ಯಾಚುರೋಪತಿ ವಿಭಾಗದ ಡಾ. ಪಿ.ಜಿ. ಅರುಣ್, ಯೋಗ ಶಿಕ್ಷಕ ಕೆ.ಕೆ.ಮಹೇಶ್, ಪತಂಜಲಿ ಯೋಗ ಶಿಕ್ಷಣದ ಶಿಕ್ಷಕ ಎಂ.ಯು.ಸುಧಾಕರ್ ಹಾಗೂ ಪ್ರಣವ ಯೋಗ ಶಿಕ್ಷಣ ಕೇಂದ್ರ್ರದ ಶಿಕ್ಷಕಿ ಶಿಲ್ಪ ಉಪಸ್ಥಿತರಿದ್ದರು.
Breaking News
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*