ನಾಪೋಕ್ಲು ಜೂ.20 : ಮಳೆಗಾಲ ಪ್ರಾರಂಭಕ್ಕೂ ಮೊದಲು ಚೆರಿಯಪರಂಬು ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ನಾಪೋಕ್ಲು ಗ್ರಾ.ಪಂ ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷೆ ಎಚ್. ಎಸ್.ಪಾರ್ವತಿ ಅವರಿಗೆ ಮನವಿ ನೀಡಿದ ಗ್ರಾಮಸ್ಥರು, ಚೆರಿಯಪರಂಬು ಗ್ರಾಮವು ಪ್ರವಾಹ ಪೀಡಿತ ಗ್ರಾಮವಾಗಿದೆ. ಗ್ರಾಮದ ರಸ್ತೆಗೆ ಸರಿಯಾದ ಚೆರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಶೇಖರಣೆಗೊಂಡು ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ಬವಣೆ ಪಡುವ ಪರಿಸ್ಥಿತಿ ಉದ್ಭವ ವಾಗಲಿದೆ. ಅದರಂತೆ ಗ್ರಾಮದಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದ್ದು ಮಳೆಗಾಲ ಪ್ರಾರಂಭಕ್ಕೂ ಮೊದಲು ಪಂಚಾಯಿತಿ ವತಿಯಿಂದ ಗ್ರಾಮಕ್ಕೆ ಆಗಬೇಕಾದ ಮೂಲಭೂತ ಸೌಕರ್ಯದ ವ್ಯವಸ್ಥೆಗಳನ್ನು ಪೂರ್ಣಗೊಳಿಸಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಪರವಂಡ ಸಿರಾಜ್, ಅಬ್ದುಲ್ ರಜಾಕ್,ಬಶೀರ್, ಅಫೀಲ್,ರಶೀದ್, ಅಬ್ದುಲ್ ಖಾದರ್ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು









