ವಿರಾಜಪೇಟೆ ಜೂ.23 : ಕೊಡಗು ಹಾಕಿ ಕ್ಷೇತ್ರಕ್ಕೆ ತನ್ನದೇಯಾದ ಕೊಡುಗೆಗಳನ್ನು ನೀಡಿದೆ. ಹಾಕಿ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಮತ್ತು ಅನುದಾನಗಳನ್ನು ಬಿಡುಗಡೆ ಮಾಡುವಂತೆ ಖೇಲೋ ಮಾಸ್ಟರ‍್ಸ್ ಗೇಮ್ಸ್ ಹಾಕಿ ಫೆಡರೇಷನ್ ಕರ್ನಾಟಕ ಸಂಸ್ಥೆಯ ಕೊಡಗು ಜಿಲ್ಲಾ ಪದಾಧಿಕಾರಿಗಳು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಖೇಲೋ ಮಾಸ್ಟರ‍್ಸ್ ಗೇಮ್ಸ್ ಹಾಕಿ ಫೆಡರೇಷನ್ ಕರ್ನಾಟಕ ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನಿವಾಸದಲ್ಲಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿತು.
ಈ ಸಂದರ್ಭ ವಿಶ್ವ ಹಾಕಿ ತೀರ್ಪುಗಾರರು, ಕರ್ನಾಟಕ ಹಾಕಿ ಅಸೋಶಿಯೆಷನ್ ಸಂಸ್ಥೆಯ ಕಾರ್ಯನಿರ್ವಾಹಕ ಸದಸ್ಯರು ಮತ್ತು ಖೇಲೋ ಮಾಸ್ಟರ‍್ಸ್ ಗೇಮ್ಸ್ ಹಾಕಿ ಫೆಡರೇಷನ್ ಕರ್ನಾಟಕ ಸಂಸ್ಥೆಯ ಉಪಧ್ಯಕ್ಷ ಅಮ್ಮಣಿಚಂಡ ಸಂಜು ಸೋಮಯ್ಯ ಮಾತನಾಡಿ, ಹಾಕಿ ಕ್ರೀಡೆಯಲ್ಲಿ ವಿಪುಲ ಅವಕಾಶಗಳಿದು, ಕಿರಿಯ ಹಿರಿಯ ಆಟಗಾರರಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಿಶೇಷ ಅನುದಾನ ಮತ್ತು ಸೌಲಭ್ಯಗಳನ್ನು ಸರ್ಕಾರ ಒದಗಿಸುವಂತಾಗಬೇಕು ಎಂದು ಸಂಸ್ಥೆ ಹಾಗೂ ಕ್ರೀಡಾಪಟುಗಳ ಪರವಾಗಿ ಮನವಿ ಪತ್ರ ಸಲ್ಲಿಸಿದರು.
ಮಾಸ್ಟರ‍್ಸ್ ಹಾಕಿ ಕರ್ನಾಟಕ ರಾಜ್ಯ ಮಹಿಳಾ ತಂಡದ ನಾಯಕಿ ಮಾಚಿಮಂಡ ದಯಂತಿ ಅಪ್ಪಯ್ಯ, ಆಟಗಾರ್ತಿಯರಾದ ಮಲ್ಚಿರ ಯಶೋಧ, ಮುಕ್ಕಾಟೀರ ಪ್ರವೀಣಾ, ಮೂಕಳೆರ ಮೀರಾ ಅಶೋಕ್, ಅರಮಣಮಾಡ ಶಕುನಾ ಅನಿಲ್ ಮತ್ತು ಅಮ್ಮಣಿಚಂಡ ತೇಜಾ ಸೋಮಯ್ಯ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ