ಕುಶಾಲನಗರ, ಜೂ.23 : ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಉತ್ತಮ ರಕ್ತ ಉತ್ಪತ್ತಿಯಾಗುವ ಜತೆಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ಕೊರತೆ ನಿವಾರಣೆಯಾಗುತ್ತದೆ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಕೊಡಗು ಜಿಲ್ಲಾ ಶಾಖೆ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಹಾಗೂ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.,,) ಯ ಘಟಕದ ಆಶ್ರಯದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುಂಟಿಕೊಪ್ಪ ಜೆ.ಸಿ.ಐ., ಕುಶಾಲನಗರ ಕಾವೇರಿ ಜೆ.ಸಿ.ಐ., ಸಂಸ್ಥೆ, ಲಕ್ಷ್ಮಿ ನಾರಾಯಣ ವಾಟರ್ ಪಾರ್ಕ್ ಹಾಗೂ ಸ್ಥಳೀಯ ಕಂದಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನ ದಿನ: 2023 ರ ಅಂಗವಾಗಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರಕ್ತದಾನ ಶಿಬಿರದ ಮಹತ್ವ ಕುರಿತು ವಿವರಿಸಿದರು.
ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಜನರು ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಆರೋಗ್ಯವಂತ ವ್ಯಕ್ತಿ ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಶರೀರದ ಅಂಗಾಂಗಗಳಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಆರೋಗ್ಯವಂತನಾಗಲು ಪೂರಕವಾಗುತ್ತದೆ ಎಂದು ಡಾ.ಕರುಂಬಯ್ಯ ತಿಳಿಸಿದರು.
ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆ ದೂರಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಸತೀಶ್ ಮಾತನಾಡಿ, ರಕ್ತದಾನ ಮತ್ತು ರಕ್ತಗುಂಪು ತಪಾಸಣೆ ಶಿಬಿರವನ್ನು ನಡೆಸುತ್ತಿರುವ ಕಾರ್ಯ ಸಮಾಜಕ್ಕೆ ಹಾಗೂ ಯುವ ಸಮೂಹಕ್ಕೆ ಮಾದರಿ ಎಂದು ಶ್ಲಾಘಿಸಿದರು.
ರಕ್ತದಾನ : ಜೀವದಾನದ ಮಹತ್ವ ಕುರಿತು ಮಾತನಾಡಿ ರಕ್ತದಾನದ ಪ್ರತಿಜ್ಞೆ ವಿಧಿ ಬೋಧಿಸಿದ ಸುಂಟಿಕೊಪ್ಪ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಇಂತಹ ಶಿಬಿರಗಳು ಯುವಜನರಲ್ಲಿ
ರಕ್ತದಾನ ಮಾಡಲು ಪ್ರೇರೇಪಣೆ ನೀಡುತ್ತವೆ ಎಂದರು.
ವಿವೇಕಾನಂದ ಮೂವ್ ಮೆಂಟ್ ನ ಸಲಹಾ ಸಮಿತಿ ಸದಸ್ಯ ಎಂ.ಡಿ.ರಂಗಸ್ವಾಮಿ ಮಾತನಾಡಿ, ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಇತರರ ಆರೋಗ್ಯ ಹಾಗೂ ಜೀವ
ರಕ್ಷಣೆಗೆ ಸಹಕರಿಸಬೇಕು ಎಂದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಸೇರಿ ಒಟ್ಟು 76 ಮಂದಿ ತಲಾ 350 ಮಿ.ಲೀ.ರಕ್ತದಾನ ಮಾಡಿದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರಸಾದ್ ಸಾಲ್ಯಾನ್, ಕುಶಾಲನಗರ ಜೇಸಿಸ್ ಕಾವೇರಿ ಸಂಸ್ಥೆಯ ಅಧ್ಯಕ್ಷ ಎಂ.ಜೆ.ರಜನಿಕಾಂತ್ ಮಾತನಾಡಿದರು.
ಕೂರ್ಗ್ ವಾಟರ್ ಪಾರ್ಕ್ ನ ಮುಖ್ಯಸ್ಥ ಲಕ್ಷ್ಮಿ ನಾರಾಯಣ (ನಾಣಿ), ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಕೆ.ಐ.ಪರಶಿವಮೂರ್ತಿ, ಡಾ ರಂಗನಾಥ್, ಡಾ ಚೂಡಾ ರತ್ನಾಕರ್, ಡಾ ನವೀನ್, ವಿವೇಕಾನಂದ ಮೂವ್ ಮೆಂಟ್ ನ ಪ್ರಮುಖರಾದ ಕೆ.ಕೆ.ಕುಸುಮ, ಸಿ.ಪೂಜಾ, ಎಂ.ಕೆ.ಹರೀಶ್, ಹರೀಶ್, ವೈಶಾಲಿ, ಜೆಐಸಿ ಸಂಸ್ಥೆಯ ವಲಯ ಪೂರ್ವಾಧ್ಯಕ್ಷ ದೇವಿಪ್ರಸಾದ್, ರಕ್ತದಾನ ಯೋಜನಾ ವಿಭಾಗದ ಸಂಯೋಜಕ ಬಿ.ಕೆ.ಸತೀಶ್ ಕುಮಾರ್, ಕುಶಾಲನಗರ ಜೇಸೀ ಕಾರ್ಯದರ್ಶಿ ಜಗದೀಶ್, ವಿವೇಕಾನಂದ ಮೂವ್ ಮೆಂಟ್ ನ ಸ್ವಯಂಸೇವಕರು, ಜೇಸೀ ಸಂಸ್ಥೆಯ ಸದಸ್ಯರು, ಎನ್.ಎಸ್.ಎಸ್.ಘಟಕದ ಸ್ವಯಂ ಸೇವಕರು, ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿನಿ ನೂರ್ ಜಿಬ ನಿರ್ವಹಿಸಿದರು. ಶಿಬಿರದಲ್ಲಿ ಒಟ್ಟು 76 ಮಂದಿ ಸ್ವಯಂಪ್ರೇರಿತರಾಗಿ
ತಲಾ 350 ಮಿ.ಲೀ.ರಕ್ತದಾನ ಮಾಡಿದರು.