ಮಡಿಕೇರಿ ಜೂ.23 : ನಗರಸಭಾ ವ್ಯಾಪ್ತಿಯಲ್ಲಿರುವ ವಿವಿಧ ಅಂಗಡಿ ಮುಂಗಟ್ಟು ಉದ್ದಿಮೆದಾರರ 2023-24 ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯು ಈಗಾಗಲೇ ಏ.1 ರಿಂದ ಪ್ರಾರಂಭವಾಗಿದ್ದು, 1838 ಅಧಿಕೃತ ಉದ್ದಿಮೆ ಪರವಾನಿಗೆಗಳ ಪೈಕಿ 148 ಉದ್ದಿಮೆದಾರರು ಮಾತ್ರ ನವೀಕರಿಸಿಕೊಂಡಿದ್ದಾರೆ.
ಉದ್ದಿಮೆ ಪರವಾನಿಗೆ ನವೀಕರಿಸದೆ ವ್ಯಾಪಾರ ವಹಿವಾಟು ಮಾಡುತ್ತಿರುವುದು 1964 ರ ಪೌರಸಭೆಗಳ ಅಧಿನಿಯಮ ಕಲಂ 243ಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗಿ ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗಿದೆ.
ಸರ್ಕಾರದ ಆದೇಶದಂತೆ ವ್ಯಾಪಾರ ತಂತ್ರಾಂಶದಲ್ಲಿ ಕಚೇರಿಗೆ ಅರ್ಜಿ ಸಲ್ಲಿಸದೆ ಉದ್ದಿಮೆದಾರರು ಸ್ವಯಂ ಚಾಲಿತವಾಗಿ ನಿಗಧಿತ ಶುಲ್ಕ ಪಾವತಿಸಿ ಆನ್‍ಲೈನ್‍ನಲ್ಲಿ ನವೀಕರಣಗೊಳಿಸುವ ಅವಕಾಶವಿದ್ದು, ಅದರಂತೆ ಚಾಲ್ತಿಯಲ್ಲಿರುವ ಉದ್ದಿಮೆದಾರರು ಪ್ರಸಕ್ತ ವರ್ಷದ ನವೀಕರಣವನ್ನು ಮಾಡಿಕೊಳ್ಳಬಹುದು.
ಉಳಿದಂತೆ ಒಂದು ವರ್ಷಕ್ಕಿಂತ ಹೆಚ್ಚು ನವೀಕರಣವಿರುವ ಉದ್ದಿಮೆದಾರರು ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಹಳೆಯ ಉದ್ದಿಮೆ ಪರವಾನಿಗೆ ಮತ್ತು ತೆರಿಗೆ ಪಾವತಿಯ ರಶೀದಿಗಳನ್ನು ಮಾತ್ರ ಅಡಕಗೊಳಿಸಿ 48 ಗಂಟೆ ಒಳಗೆ ನವೀಕರಣಗೊಳಿಸಿಕೊಳ್ಳುವಂತೆ ಸರಳಿಕರಣ ಮಾಡಲಾಗಿದೆ. ಈ ಸದಾವಕಾಶ ಉಪಯೋಗಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ http://www.madikericity.mrc.gov.in ಅಥವಾ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತ ವಿಜಯ ಕೋರಿದ್ದಾರೆ.
Breaking News
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*
- *ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು : ತೆನ್ನಿರ ಮೈನಾ ಶ್ಲಾಘನೆ*
- *ವ್ಯಾoಡಮ್ ಎಂಟರ್ಪ್ರೈಸಸ್ ನ ವಾರ್ಷಿಕೋತ್ಸವ : ನ.24 ರಂದು ಲಕ್ಕಿ ಡ್ರಾ ಸಮಾರಂಭ*