ಮಡಿಕೇರಿ ಜೂ.23 : ಐಗೂರು, ಯಸಳೂರು ಮತ್ತು ಬಿಳಿಗೇರಿಯಲ್ಲಿರುವ ಸಾಂಬಾರ ಮಂಡಳಿಯ ಇಲಾಖಾ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಸಾಂಬಾರ ನಾಟಿ ಸಸಿಗಳು ಲಭ್ಯವಿದೆ. ಕೊಡಗು ಜಿಲ್ಲೆಯ ರೈತರು ಈ ಹಂಗಾಮಿನಲ್ಲಿ ನಾಟಿ ಮಾಡಲು ಸಸಿಗಳನ್ನು ಪಡೆಯಬಹುದು. ಪ್ರತಿ ಚಿಕ್ಕ ಏಲಕ್ಕಿ ಬೀಜ ರೂ.15, ಪ್ರತಿ ಏಲಕ್ಕಿ ಕ್ಲೋನಲ್ ಸಕ್ಕರ್ ರೂ. 50, ಬ್ಲಾಕ್ ಪೆಪ್ಪರ್ ರೂಟೆಡ್ ಕಟಿಂಗ್ಸ್ ರೂ.7 ಮತ್ತು ಕರಿಮೆಣಸು ನ್ಯೂಕ್ಲಿಯಸ್ ಮೆಟಿರಿಯಲ್ ರೂ.20
ಐಗೂರು ಸ್ಪೈಸಸ್ ಬೋರ್ಡ್‍ನ ನರ್ಸರಿಯ ಫಾರ್ಮ್ ವ್ಯವಸ್ಥಾಪಕರು-9745295470, ಯಸಳೂರು ಸಾಂಬಾರ ಮಂಡಳಿ ಇಲಾಖಾ ನರ್ಸರಿಯ ವ್ಯವಸ್ಥಾಪಕರು 8310208940 ಹಾಗೂ ಬಿಳಿಗೇರಿ ಸಾಂಬಾರ ಮಂಡಳಿ ಇಲಾಖೆಯ ನರ್ಸರಿಯ ವ್ಯವಸ್ಥಾಪಕರು 9480249497/ 8281376265 ನ್ನು ಸಂಪರ್ಕಿಸಬಹುದು ಎಂದು ಸಾಂಬಾರ ಮಂಡಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.









