ಕುಶಾಲನಗರ ಜೂ.25 : ಕಳೆದ ಐದು ವರ್ಷಗಳಿಂದ ಸರಕಾರಿ ಶಾಲೆ ಉಳಿಸಿ ಅಭಿಯಾನದಡಿಯಲ್ಲಿ ರಾಜ್ಯದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್ ಹಾಗೂ ನಮ್ಮ ಕೊಡಗು ತಂಡವೂ ಈ ಶೈಕ್ಷಣಿಕ ವರ್ಷದಲ್ಲಿ ಕೂಡ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಯೋಜನೆಯ ಮೊದಲ ಹಂತವಾಗಿ ಮೈಸೂರು ಜಿಲ್ಲೆಯ ದೊಡ್ಡೆಹೊಸೂರು, ಕೊಡಗಿನ ಬೋಯಿಕೇರಿ, ತಾಳತ್ ಮನೆ ಮತ್ತು ಸೋಮವಾರಪೇಟೆಯ ಬಿಳುಗುಂದ ಶಾಲೆ ಸೇರಿದಂತೆ ಸುಮಾರು ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯು ಎಸ್. ಟಿ. ಸಂಸ್ಥೆ ಬೆಂಗಳೂರು, ಭವಿಷ್ಯ ಚಾರಿಟೇಬಲ್ ಟ್ರಸ್ಟ್ ಹಾಗು ದಾನಿಗಳ ಸಹಾಯದಿಂದ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬನವಾಸಿ ಸಂಸ್ಥೆಯ ಜೈಕಿರಣ್, ಕಿರಣ್ಮಯಿ ಶರ್ಮ, ಶಮಂತ್ ಹೊಸಹೊಳಲು ಜಯಕೃಷ್ಣ ಮತ್ತು ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನೌಶಾದ್ ಜನ್ನತ್ತ್, ತಂಡದ ಹೂವಯ್ಯ,ಲೋಹಿತ್, ಮೋಹನ್, ನವೀನ್, ಬಶೀರ್ ಮುಂತಾದವರು ಭಾಗವಹಿಸಿದ್ದರು.