ಮಡಿಕೇರಿ ಜು.11 : ಮಳೆಯಿಂದ ತೀರ ಹದಗೆಟ್ಟಿದ್ದ ಮಾಂದಲಪಟ್ಟಿ ವ್ಯೂ ಪಾಯಿಂಟ್ ರಸ್ತೆಯನ್ನು ನಂದಿಮೊಟ್ಟೆ ಜೀಪು ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಶ್ರಮದಾನ ಮೂಲಕ ಕಲ್ಲು ಮಣ್ಣು ಹಾಕಿ ದುರಸ್ತಿಪಡಿಸಲಾಯಿತು.
ಈ ಸಂದರ್ಭ ಚಾಲಕರಾದ ಶರಣು ಅಯ್ಯಪ್ಪ, ಪುಷ್ಪರಾಜ್, ಮನು , ದರ್ಶನ್, ಚರಣ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.









