ಮಡಿಕೇರಿ ಜು.12 : ಇನ್ನರ್ ವೀಲ್ ಜಿಲ್ಲೆ 318 ನ ಅಧ್ಯಕ್ಷೆಯಾಗಿ ಮಡಿಕೇರಿಯ ಪೂಣಿ೯ಮಾ ರವಿ ಅಧಿಕಾರ ಸ್ವೀಕರಿಸಿದ್ದಾರೆ.
ಮೈಸೂರಿನಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಮಡಿಕೇರಿಯ ಹೆಸರಾಂತ ವೈದ್ಯ ಡಾ.ರವಿ ಅಪ್ಪಾಜಿ ಅವರ ಪತ್ನಿ ಪೂಣಿ೯ಮಾ ರವಿ ಅವರು ಇನ್ನರ್ ವೀಲ್ ಜಿಲ್ಲೆ 318 ನ ಅಧ್ಯಕ್ಷೆಯಾಗಿ ಭಾರತೀಯ ಇನ್ನರ್ ವೀಲ್ ಸಂಸ್ಥೆಯ ಅಸೋಸಿಯೇಷನ್ ಅಧ್ಯಕ್ಷೆ ಪ್ರೀತಿ ಗುಗ್ನಾನಿ ಅವರಿಂದ ಅಧಿಕಾರ ಪಡೆದರು.
ಈ ಸಂದಭ೯ ಮಾತನಾಡಿದ ಪ್ರೀತಿ ಗುಗ್ನಾನಿ, ಇನ್ನರ್ ವೀಲ್ ಸಂಸ್ಥೆಯು ಈ ವಷ೯ ಭಾರತದಾದ್ಯಂತ ರೂಪಿಸಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಸದಸ್ಯೆಯರು ಕಾಯ೯ನಿವ೯ಹಿಸುವಂತೆಯೂ ಪ್ರೀತಿ ಗುಗ್ನಾನಿ ಕರೆ ನೀಡಿದರು.
ಅದಿಕಾರ ಸ್ವೀಕರಿಸಿ ಮಾತನಾಡಿದ ಪೂಣಿ೯ಮಾ ರವಿ , ಹಲವಷ್ಟು ಮಾಜಿ ಅಧ್ಯಕ್ಷೆಯರು ಇನ್ನರ್ ವೀಲ್ ಸಂಸ್ಥೆಯ ಸವ೯ತೋಮುಖ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಈ ವಷ೯ ಶಿಕ್ಷಣ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಷ್ಟು ಯೋಜನೆಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗುತ್ತದೆ. ಹಾಗೇ ಈ ವಷ೯ದಲ್ಲಿ ಪೇಪರ್ ಬಳಕೆ ಮಾಡದೇ ಪೇಪರ್ ರಹಿತವಾಗಿ ಕಾಯ೯ಯೋಜನೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದೂ ಹೇಳಿದರು.
ಇನ್ನರ್ ವೀಲ್ ಜಿಲ್ಲೆ 318 ಕೊಡಗು, ಮೈಸೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡಿದ್ದು, 50 ಕ್ಲಬ್ ಗಳ ಮೂಲಕ 1800 ಸದಸ್ಯೆಯರನ್ನು ಹೊಂದಿದೆ. ಶತಮಾನೋತ್ಸವ ಸಂಭ್ರಮದಲ್ಲಿರುವ ಇನ್ನರ್ ವೀಲ್ ಜಿಲ್ಲೆ 318 ಈ ಸಾಲಿನಲ್ಲಿ ಬೆಳಕನ್ನು ಪ್ರಜ್ವಲಿಸು ಎಂಬ ಧ್ಯೈಯವಾಕ್ಯವನ್ನು ಹೊಂದಿದೆ. ಡಿಸೆಂಬರ್ ನಲ್ಲಿ ಇನ್ನರ್ ವೀಲ್ ಜಿಲ್ಲಾ ಸಮ್ಮೇಳನ ಮಡಿಕೇರಿಯಲ್ಲಿ ಆಯೋಜಿತವಾಗಿದೆ ಎಂದು ಪೂಣಿ೯ಮಾ ರವಿ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಿಂದ ಮಿನ್ನಿ ಬೋಪಯ್ಯ, ಪ್ರೇಮಕಾಳಪ್ಪ ಕೆಲವು ವಷ೯ಗಳ ಮೊದಲು ಇನ್ನರ್ ವೀಲ್ ಜಿಲ್ಲಾಧ್ಯಕ್ಷರಾಗಿದ್ದು ಇದೀಗ ಪೂಣಿ೯ಮಾ ರವಿ ಕೊಡಗಿನಿಂದ ಮೂರನೇ ಅಧ್ಯಕ್ಷೆಯಾಗಿ ಇನ್ನರ್ ವೀಲ್ ಜಿಲ್ಲೆಗೆ ನೇಮಕವಾಗಿದ್ದಾರೆ. ಇನ್ನರ್ ವೀಲ್ ನಲ್ಲಿ ಪೂಣಿ೯ಮಾ ರವಿ ಜಿಲ್ಲಾ ಕಾಯ೯ದಶಿ೯ಯಾಗಿ, ಖಜಾಂಚಿಯಾಗಿ, ವಾತಾ೯ ಸಂಚಿಕೆಯ ಸಂಪಾದಕಿಯಾಗಿ , ಉಪಾಧ್ಯಕ್ಷೆಯಾಗಿಯೂ ಕಾಯ೯ನಿವ೯ಹಿಸಿದ್ದರು.
ಪದಗ್ರಹಣ ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲೆಯ ನಿಕಟಪೂವ೯ ಅಧ್ಯಕ್ಷೆ ಕವಿತಾ ನಿಯತ್ ಹಾಜರಿದ್ದರು. ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆಯರು, ಪದಾಧಿಕಾರಿಗಳು, ನೂರಾರು ಸದಸ್ಯೆಯರು, ರೋಟರಿ ಸಂಸ್ಥೆಯ ಮಾಜಿ ಗವನ೯ರ್ ಗಳು, ಸದಸ್ಯರು ಪಾಲ್ಗೊಂಡಿದ್ದರು.









