ನಾಪೋಕ್ಲು ಜು.14 : ಇಂದಿರಾ ನಗರದಲ್ಲಿರುವ ಸಮುದಾಯ ಭವನದ ಒಳ ಮತ್ತು ಹೊರಗೆ ಸುಚಿತ್ವ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳಿಯ ಶೌರ್ಯ ಸ್ವಯಂ ಸೇವಕರು ಸೇರಿ ಇಡಿ ಭವನದ ಸುತ್ತು ಮುತ್ತ ಕಾಡು, ಕಸ ತೆಗೆದು ಒಳಗೆ ಸ್ವಚ್ಛ ಗೊಳಿಸುವುದರ ಮೂಲಕ ಶ್ರಮದಾನ ಮಾಡಿದರು.
ಈ ಸೇವಾ ಕಾರ್ಯದಲ್ಲಿ ಗೀತಾ, ಆಶಾ, ಶರವಣ, ದಮಯಂತಿ, ಹಾಜರಿದ್ದರು.
ಶೌರ್ಯ ತಂಡದ ಸದಸ್ಯರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ವಿವಿಧ ಸಾಮಾಜಿಕ ಉಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶಾಲೆ, ಅಂಗನವಾಡಿ, ಸಮುದಾಯ ಭವನಗಳ ಸ್ವಚ್ಚತೆ, ರಸ್ತೆ ಗುಂಡಿಗಳ ಮುಚ್ಚುವಿಕೆ, ವೃದ್ಧರಿಗೆ ನೆರವು ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಸಂಯೋಜಕಿ ಬಾಳೆಯಡ ದಿವ್ಯ ನೇತೃತ್ವದಲ್ಲಿ ಶೌರ್ಯ ಸ್ವಯಂ ಸೇವಕ ತಂಡದ ಸದಸ್ಯರು ಹಮ್ಮಿಕೊಳ್ಳುತ್ತಿರುವುದು ಸಾರ್ವಜನಿಕರ ಪ್ರಸಂಸ್ಥೆಗೆ ಪಾತ್ರವಾಗಿದೆ.
ವರದಿ : ದುಗ್ಗಳ ಸದಾನಂದ