ಮಡಿಕೇರಿ ಜು.17 : ಗೋಣಿಕೊಪ್ಪಲು ಕಾಫಿ ಮಂಡಳಿ ಆಶ್ರಯದಲ್ಲಿ ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಹಾಯದೊಂದಿಗೆ ಫಾರ್ಮರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕಾಫಿ ಬೆಳೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು.
ಗೊಣೆಕೊಪ್ಪಲು ಕಾಫಿ ಮಂಡಳಿಯ ವಿಜ್ಞಾನಿ ಡಾ. ಮುಖಾಲಿಬ್ ವಿಚಾರ ಸಂಕಿರಣ ನಡೆಸಿಕೊಟ್ಟುರು.
ಕಾಫಿ ಮಂಡಳಿಯಿಂದ ಬೆಳೆಗಾರರಿಗಾಗಿ ಲಭ್ಯ ವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಬಾಳೆಲೆ ಭಾಗದಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿ ರೋಬಸ್ಟಾ ಕಾಫಿ ಬೆಳೆಯುತಿದ್ದು ಮರುನಾಟಿಗೆ, ಕಾಫಿ ಒಣಗಿಸಲು ಸಿಮೆಂಟ್ ಕಣ, ತೋಟಕ್ಕೆ ನೀರು ಹಾರಿಸಲು ಪಂಪ್ ಸೆಟ್ ವ್ಯವಸ್ಥೆ ಗೆ ಸಹಾಯಧನವಿರುವ ಬಗ್ಗೆ ಮಾಹಿತಿ ನೀಡಿದರು.
ಬಾಳೆಲೆ ಯನ್ನು ರೋಬಸ್ಟಾ ಬೆಳೆಯುವ ಭಾಗವೆಂದು ಗುರುತಿಸಿದ್ದು, ಈ ಭಾಗದಲ್ಲಿ ಹೊಸ ತೋಟಮಾಡುವವರಿಗೆ ರೋಬಸ್ಟಾ ತಳಿಗೆ ಮಾತ್ರ ಸಹಾಯಧನ ಲಭ್ಯವಿದ್ದು. ಇತ್ತೀಚಿನ ದಿನಗಳಲ್ಲಿ ಹವಾಮಾನ ಎರುಪೇರಾಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಮಳೆ ಮಳೆಗಾಲದಲ್ಲಿ ಬಿಸಿಲು ಆಗುತ್ತಿದೆ. ಈ ನಿಟ್ಟಿನಲ್ಲಿ ತೋಟಗಳಲ್ಲಿ ನಿರ್ದಿಷ್ಟ ಪ್ರಮಾಣದ ನೆರಳಿನ ವ್ಯವಸ್ಥೆ ಬೇಕಾಗಿದೆ. ಕಾರಣ ಈ ವರ್ಷ ಬೇಸಿಗೆಯಲ್ಲಿ ತಾಪಮಾನ ಗರಿಷ್ಠ 36 ಡಿಗ್ರಿಯಷ್ಟು ದಾಖಲಾಗಿದೆ. ಹೂವು ಮಳೆ ಫೆಬ್ರುವರಿ ಎರಡನೇ ವಾರ ಮಾಡಬೇಕಾಗಿದ್ದು. ಒಂದು ವೇಳೆ ಜನವರಿಯಲ್ಲಿ ಮಳೆ ಬಿದ್ದರೆ 40 ದಿನಗಳ ನಂತರ ಹೂಮಳೆಗೆ ಸಮಯ ನಿಗದಿ ಮಾಡಬೇಕು. ಅಂದರೆ ರೋಬಸ್ಟಾ ಗಿಡಗಳು ದಣಿಯ ಬೇಕು. ಹೂಮಳೆಯ ನಂತರ ಪ್ರತಿ 20ದಿನ ಕಾದು ಮತ್ತೊಮ್ಮೆ ನೀರು ಹಾಯಿಸಿ ಮುಂಗಾರು ಮಳೆ ಬೀಳುವ ತನಕ ಪ್ರತಿ 20 ದಿನಕ್ಕೊಮ್ಮೆ ನೀರು ನೀಡುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಹಿರಿಯ ವಿಸ್ತರಣಾ ಅಧಿಕಾರಿಗಳಾದ ರಮಣ್, ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅದೇಂಗಡ ಮಂದಣ್ಣ, ಫಾರ್ಮರ್ಸ್ ಅಸೋಸಿಯೇಷನ್ ಆಡಳಿತ ಮಂಡಳಿಯ ಪಧದಿಕಾರಿಗಳು ಹಾಗೂ ಕಾಫಿ ಬೆಳೆಗಾರರು ಹಾಜರಿದ್ದರು. ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಸ್ವಾಗತಿಸಿದರು.