ಕಡಂಗ ಜು.18 : ಕಡಂಗ ಬದ್ರಿಯಾ ಸುನ್ನೀ ಮುಸ್ಲಿಂ ಜಮಾಅತ್ ನ ವಾರ್ಷಿಕ ಮಹಾಸಭೆ ಸ್ಥಳೀಯ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು.
ಹುಸೈನ್ ಸಖಾಫಿ ಎಮ್ಮೆಮಾಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸ್ಥಳೀಯ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ಉದ್ಘಾಟಿಸಿದರು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ ನೆರವೇರಿಸಿದರು.
ನಂತರ ಹಲವಾರು ಚರ್ಚೆಗಳು ನಡೆದು ಅದಕ್ಕೆ ಜಮಾಅತ್ ಅಧ್ಯಕ್ಷ ಸುಲೈಮಾನ್ ಪ್ರತಿಕ್ರಿಯೆಸಿ ಉತ್ತರಿಸಿದರು.
ಅಬ್ದುಲ್ ಸಲಾಂ ಸ್ವಾಗತಿಸಿದರು. ಕಾರ್ಯದರ್ಶಿ ಆಶಿಕ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ನೌಶಾದ್ ಲೆಕ್ಕ ಪತ್ರವನ್ನು ಮಂಡಿಸಿದರು.
ನಂತರ 2023-24 ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್ ಅರಫಾ, ಉಪಾಧ್ಯಕ್ಷರಾಗಿ ಕೆ.ಇ.ಉಸ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಯು.ಇ.ರಾಶೀದ್, ಕೋಶಾಧಿಕಾರಿ ಸಿ.ಎ.ರಜಾಕ್, ಜೊತೆ ಕಾರ್ಯದರ್ಶಿ ಎಂ.ಬಿ.ನೌಫಲ್ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಹಾಶಿಮ್, ಕರೀಂ, ಅಶ್ರಫ್, ಸುಹೈಲ್, ರಝಕ್ ಕೆ.ಎ.ಸಹದ್ ಅವರನ್ನು ಆಯ್ಕೆ ಮಾಡಲಾಯಿತು.
ನಿರೂಪಣೆಯನ್ನು ಅಶ್ರಫ್ ಹಾಗೂ ರಶೀದ್ ಐಬಿಎಂ ನೆರವೇರಿಸಿದರು.
ವರದಿ : ನೌಫಲ್ ಕಡಂಗ