ಮಡಿಕೇರಿ ಜು.18 : ಮಾಜಿ ಯೋಧ, ಗ್ರಾ.ಪಂ ಮಾಜಿ ಸದಸ್ಯ ಹಾಗೂ ಹಾಕಿ ಪಟು ಎಂ.ಪಿ.ಪೂಣಚ್ಚ(61) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಕೆ.ಜಿ.ಹಬ್ಬನಕುಪ್ಪೆಯ ನಿವಾಸಿ ಪೂಣಚ್ಚ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.