ಸೋಮವಾರಪೇಟೆ ಜು.25 : ಡಾ. ಮಂಥರ್ ಗೌಡ ಅಭಿಮಾನಿ ಬಳಗದ ಉದ್ಘಾಟನೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಸ್ಥಳೀಯ ಕೊಡವ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಯುವ ಸಮುದಾಯವನ್ನು ದೇಶದ ಶಕ್ತಿಯನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣದ ಸಂಕಲ್ಪ ನನ್ನದಾಗಿದ್ದು, ಇದಕ್ಕೆ ಜನತೆ ಸಹಕಾರ ನೀಡಬೇಕು ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧವಾಗಿದ್ದು, ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣ, ಶಾಲಾ ಕಾಲೇಜುಗಳಲ್ಲಿ ಉತ್ತಮ ಪರಿಸರ ನಿರ್ಮಾಣ, ಪ್ರತಿ ಗ್ರಾಮಗಳಲ್ಲಿ ಯುವಕ ಸಂಘಗಳ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಆರ್. ಸುರೇಶ್, ವಿ.ಪಿ. ಶಶಿಧರ್, ಕೆ.ಎಂ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಪ್ರಮುಖರಾದ ನಾಗೇಂದ್ರ ಬಾಬು, ಎಸ್.ಎಂ. ಚಂಗಪ್ಪ, ಕೆ.ಎ. ಯಾಕೂಬ್, ಬಿ.ಈ. ಜಯೇಂದ್ರ, ಡಾ. ಮಂಥರ್ ಗೌಡ ಅಭಿಮಾನಿ ಬಳಗದ ಅಧ್ಯಕ್ಷ ಸುಜಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.








