ಮಡಿಕೇರಿ ಜು.26 : ಕೊಡಗು ಜಿಲ್ಲೆಯ ಮಾಜಿ ಸೈನಿಕರ ಪ್ರಮುಖ ಬೇಡಿಕೆಯಾಗಿರುವ ಮಡಿಕೇರಿಯಲ್ಲಿ ಸಮುದಾಯ ಭವನ ನಿಮಾ೯ಣ ಸಂಬಂಧಿತ ಸಕಾ೯ರದ ಮಟ್ಟದಲ್ಲಿ ಚಚಿ೯ಸಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಹೇಳಿದ್ದಾರೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ವತಿಯಿಂದ ನೆಹರು ಯುವಕೇಂದ್ರ ಹಾಗೂ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ಆಯೋಜಿತ ಕಾಗಿ೯ಲ್ ದಿನಾಚರಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡು ನಿವೖತ್ತ ವಾಯುಸೇನಾಧಿಕಾರಿ ಕಿಗ್ಗಾಲು ಗಿರೀಶ್ ಅವರನ್ನು ಸನ್ಮಾನಿಸಿ ಮಂಥರ್ ಗೌಡ ಮಾತನಾಡಿದರು.
ಜಿಲ್ಲೆಯಲ್ಲಿ 5000 ಕ್ಕೂ ಅಧಿಕ ನಿವೖತ್ತ ಯೋಧರಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ನಿವೖತ್ತ ಯೋಧರಿಗೆ ಅವರದ್ದೇ ಆದ ಸಮುದಾಯ ಭವನಗಳಿದೆ. ಆದರೆ ಬಹಳ ವಷ೯ಗಳಿಂದಲೂ ಮಾಜಿ ಸೈನಿಕರ ಮುಖ್ಯ ಬೇಡಿಕೆಯಾಗಿದ್ದ ಸಮುದಾಯ ಭವನದ ಅಗತ್ಯತೆ ಇಂದಿಗೂ ಈಡೇರಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ತಾನು ಜಿಲ್ಲಾಡಳಿತದ ಮೂಲಕ ಸೂಕ್ತ ನಿವೇಶನ ಗುರುತಿಸಿ ಸಮುದಾಯ ಭವನವನ್ನು ಮಾಜಿ ಸೈನಿಕರ ಸಂಘಕ್ಕೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಡಾ.ಮಂಥರ್ ಗೌಡ ಹೇಳಿದರು.
ಕಾಗಿ೯ಲ್ ವಿಜಯೋತ್ಸವದಂದು ಪ್ರತೀಯೋವ೯ರು ನಮ್ಮ ದೇಶದ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುತ್ತಿರುವ ವೀರಯೋಧರನ್ನು ಸ್ಮರಿಸಬೇಕು. ಅಂತೆಯೇ ಕಾಗಿ೯ಲ್ ಸಮರದಲ್ಲಿ ಶತ್ರುಗಳ ವಿರುದ್ದ ಹೋರಾಡಿ ಭಾರತದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದವರನ್ನೂ ಸ್ಮರಿಸಿಕೊಳ್ಳಲೇಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಡಾ.ಮಂಥರ್ ಗೌಡ, ಸೇನೆಯಲ್ಲಿ ದೇಶ ರಕ್ಷಣೆಯ ಕತ೯ವ್ಯ ನಿವ೯ಹಿಸಿ ನಿವೖತ್ತರಾಗುವ ಸೈನಿಕರಿಗೆ ಅಗತ್ಯ ನೆರವು ನೀಡುವುದು ಕೂಡ ನಮ್ಮೆಲ್ಲರ ಜವಬ್ದಾರಿಯಾಗಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಿರೀಶ್ ಕಿಗ್ಗಾಲು, 24 ವರ್ಷಗಳ ಹಿಂದೆ ಪಾಕೀಸ್ತಾನೀ ಪಡೆಗಳ ವಿರುದ್ದ ಕಾಗಿ೯ಲ್ ವಲಯದಲ್ಲಿ ಜರುಗಿದ ಸಮರದಲ್ಲಿ ಭಾರತದ ಎರಡು ಮಿಗ್ ಹಾಗೂ ಒಂದು ಹೆಲಿಕಾಪ್ಟರ್ ಪತನಗೊಂಡದ್ದಲ್ಲದೆ 527ಯೋಧರು ಹುತಾತ್ಮರಾದರು. ಶತ್ರುಪಾಳಯವಾದ ಪಾಕಿಸ್ತಾನದ 1500 ಕ್ಕೂ ಸೈನಿಕರು ಸತ್ತರು.ಈ ಸಂಘರ್ಷಕ್ಕಾಗಿ ಭಾರತಕ್ಕೆ 1200 ಕೋಟಿ ರೂಪಾಯಿ ವೆಚ್ಚವಾಗಿತ್ತು. ಕಾಗಿ೯ಲ್ ಯುದ್ಧದಲ್ಲಿ ಮಡಿದ ಭಾರತದ ಎಲ್ಲ ಯೋಧರ ಹೆಸರನ್ನು ಕಾರ್ಗಿಲ್ ಸಮೀಪದ ದ್ರಾಸ್ ನಲ್ಲಿ ದಾಖಲಿಸಿ ಅಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ.ನಾಲ್ವರು ಭಾರತೀಯ ಯೋಧರಿಗೆ ಪರಮ ವೀರ ಚಕ್ರ ಪ್ರಶಸ್ತಿಯೂ ಲಭಿಸಿದೆ.
ಈ ಯುದ್ಧದಲ್ಲಿ ಪಾಕೀಸ್ತಾನವು ಸೋತದ್ದಲ್ಲದೆ ವಿಶ್ವದ ಅನೇಕ ದೇಶದ ನಾಯಕರಿಂದ ಛೀಮಾರಿಯನ್ನೂ ಹಾಕಿಸಿಕೊಂಡಿತು ಎಂದು ಸ್ಮರಿಸಿದರು.
ಕಾಗಿ೯ಲ್ ಸಮರದಲ್ಲಿ ಭಾರತದ ಗೆಲುವಿಗೆ ಕಾರಣರಾಗಿ ನಮ್ಮ ದೇಶದ ಭೂಮಿಯನ್ನು ಸಂರಕ್ಷಿಸಿದ ವೀರಯೋಧರನ್ನು ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಹೆಮ್ಮೆಯಿಂದ ಸ್ಮರಿಸಿದರು. ರೋಟರಿ ವುಡ್ಸ್ ಕಾಯ೯ದಶಿ೯ ಹರೀಶ್ ಕಿಗ್ಗಾಲು ವಂದಿಸಿದ ಕಾಯ೯ಕ್ರಮದಲ್ಲಿ ವೀಣಾಕ್ಷಿ ಸನ್ಮಾನಿತರ ಪರಿಚಯ ನೆರವೇರಿಸಿದರು.
ಕಾಯ೯ಕ್ರಮದಲ್ಲಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ.ಜೀವನ್, ಕಾಯ೯ದಶಿ೯ ಡಿ.ಐ. ಪುರುಷೋತ್ತಮ್ , ನೆಹರು ಯುವಕೇಂದ್ರದ ಸುಕುಮಾರ್, ದೀಪ್ತಿ, ರಂಜಿತ, ರೋಟರಿ ಪ್ರಮುಖರಾದ ಅನಿಲ್ ಎಚ್.ಟಿ. ಬಿ.ಜಿ. ಅನಂತಶಯನ, ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರಾ, ಕೊಡಗು ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರರೈ, ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಮತ್ತಿತರರು ಹಾಜರಿದ್ದರು. ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು.
:: ಸಚಿವರಿಂದ ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪನಮನ :: ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪಾಚ೯ನೆ ಮಾಡಿ ಸಕಾ೯ರದ ಪರವಾಗಿ ಗೌರವ ನಮನ ಸಲ್ಲಿಸಿದರು.
ಈ ಸಂದಭ೯ ಜಿಲ್ಲಾಧಿಕಾರಿ ವೆಂಕಟ ರಾಜು, ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರ್ ರಾಜ್, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಅಧಿಕಾರಿ ಚಿನ್ನಸ್ವಾಮಿ ಹಲವಾರು ಗಣ್ಯರು ಅಮರ್ ಜವಾನ್ ಸ್ಮಾರಕಕ್ಕೆ ಧಾರಾಕಾರ ಮಳೆ ನಡುವೇ ಪುಪ್ಪಾಚ೯ನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.