ಮಡಿಕೇರಿ ಜು.26 : ಮುಂಬರುವ ಮಹಾರಾಜ ಟ್ರೋಫಿ- 2023ಕ್ಕಾಗಿ ಸೈಕಲ್ ಪ್ಯೂರ್ ಅಗರಬತ್ತಿ ಒಡೆತನದ ಮೈಸೂರು ವಾರಿಯರ್ಸ್ ತಂಡದಿಂದ ಜು.29 ರಂದು ಮೈಸೂರಿನಲ್ಲಿ ಟ್ಯಾಲೆಂಟ್ ಹಂಟ್ ನಡೆಯಲಿದೆ.
ಭಾರತದ ಪ್ರಮುಖ ಅಗರಬತ್ತಿ ತಯಾರಕರು ಮತ್ತು ಮೈಸೂರು ವಾರಿಯರ್ಸ್ನ ಹೆಮ್ಮೆಯ ಮಾಲೀಕರಾದ ಸೈಕಲ್ ಪ್ಯೂರ್ ಅಗರಬತ್ತಿ, ಕರ್ನಾಟಕದ ವಿವಿಧ ಪ್ರದೇಶಗಳಿನ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 2023 ಸರಣಿಗಾಗಿ ಜುಲೈ 29 ರಂದು ಮೈಸೂರು ನಗರದ ಎಸ್‌ಎನ್‌ಡಿಆರ್ ಕ್ರೀಡಾಂಗಣದಲ್ಲಿ ಟ್ಯಾಲೆಂಟ್ ಹಂಟ್ ಅನ್ನು ಆಯೋಜಿಸಿದೆ.
ಈ ಕಾರ್ಯಕ್ರಮ ದೂರದ ಪ್ರದೇಶಗಳ ಮಹತ್ವಾಕಾಂಕ್ಷಿ ಕ್ರೀಡಾಪಟುಗಳನ್ನು ವಿಶೇಷವಾಗಿ ಕ್ರಿಕೆಟ್ ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ರಾಜ್ಯದ ಎಲ್ಲಾ ಉದಯೋನ್ಮುಖ ಪ್ರತಿಭೆಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಬಹುದು ಮತ್ತು ಈ ವರ್ಷದ ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಳ್ಳಬಹುದು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಡಿಯಲ್ಲಿ ನೋಂದಾಯಿತ ಕ್ಲಬ್‌ಗಳನ್ನು ಪ್ರತಿನಿಧಿಸುವ ಅತ್ಯುತ್ತಮ ಆಟಗಾರರ ಆಯ್ಕೆಗಾಗಿ ಈ ಬಹು ನಿರೀಕ್ಷಿತ ಟ್ಯಾಲೆಂಟ್ ಹಂಟ್ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಭಾಗವಹಿಸುವ ಕ್ರೀಡಾಪಟುಗಳು ಕಳೆದ ಎರಡು ವರ್ಷಗಳಿಂದ ತಮ್ಮ ಕೆಎಸ್‌ಸಿಎ ಅಂಕಿಅಂಶಗಳು ಮತ್ತು ಸುಸಜ್ಜಿತ ಕ್ರಿಕೆಟ್ ಕಿಟ್‌ಗಳೊಂದಿಗೆ ಬರಬೇಕು. ಆಯ್ಕೆ ಸುಗಮಗೊಳಿಸಲು ಅಗತ್ಯ ಕ್ರಿಕೆಟ್ ಚೆಂಡುಗಳನ್ನು ಒದಗಿಸಲಾಗುವುದು.
::: 215 ಆಟಗಾರರು :::
ಕಳೆದ ಬಾರಿಯ ಪ್ರತಿಭಾನ್ವೇಷಣೆಯ ಸಂದರ್ಭದಲ್ಲಿ ಮೈಸೂರು ವಾರಿಯರ್ಸ್ ಮೈಸೂರು ಮತ್ತು ಬೆಂಗಳೂರು ಎರಡರಲ್ಲೂ ಟ್ಯಾಲೆಂಟ್ ಹಂಟ್ ನಡೆಸಿ, ಅಗಾಧ ಪ್ರತಿಕ್ರಿಯೆಯನ್ನು ಪಡೆದಿತ್ತು. ಕಳೆದ ವರ್ಷ, ಮೈಸೂರಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಾರಿಯರ್ಸ್ ತಂಡದಲ್ಲಿ ಈ ಕಾರ್ಯಕ್ರಮದಲ್ಲಿ 215 ಯುವ ಕ್ರಿಕೆಟಿಗರರು ಭಾಗಿಯಾಗಿದ್ದರು. ಪ್ರತಿಭಾನ್ವಿತರಲ್ಲಿ, 85 ಮಧ್ಯಮ ವೇಗದ ಬೌಲರ್‌ಗಳು, 32 ಸ್ಪಿನ್ನರ್‌ಗಳು, 35 ಬ್ಯಾಟ್ಸ್ ಮನ್ ಗಳು 58 ಆಲ್-ರೌಂಡರ್‌ಗಳು ಮತ್ತು 05 ವಿಕೆಟ್‌ಕೀಪರ್‌ಗಳು ಇದ್ದರು.
ಪ್ರತಿಷ್ಠಿತ ಕೆಪಿಎಲ್ ಟೂರ್ನಮೆಂಟ್‌ನಲ್ಲಿ ಮೈಸೂರು ವಾರಿಯರ್ಸ್ ಅನ್ನು ಹೆಮ್ಮೆಯಿಂದ ಪ್ರತಿನಿಧಿಸಲು ಕಳೆದ ವರ್ಷ ಉತ್ತಮ್ ಅಯ್ಯಪ್ಪ ಹಾಗೂ ಚೇತನ್ ಎಲ್.ಆರ್ ಅವರು ಈ ಪ್ರಕ್ರಿಯೆಯಿಂದ ಆಯ್ಕೆಗೊಂಡಿದ್ದರು. ಕ್ರಿಕೆಟ್ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈ ಇಬ್ಬರು ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಂಡಿದ್ದಾರೆ.
::: ಉತ್ತೇಜಿಸಲು ಪ್ರತಿಭಾನ್ವೇಷಣೆ :::
ಟ್ಯಾಲೆಂಟ್ ಹಂಟ್ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ವಾರಿಯರ್ಸ್ನ ಮಾಲೀಕರಾದ ಅರ್ಜುನ್ ರಂಗ, “ಎನ್‌ಆರ್ ಗ್ರೂಪ್‌ನಲ್ಲಿ, ವಿಶೇಷವಾಗಿ ಕ್ರಿಕೆಟ್‌ನಂತಹ ಕ್ರೀಡೆಗಳಲ್ಲಿ ಮಹತ್ವಾಕಾಂಕ್ಷಿ ಪ್ರತಿಭೆಗಳ ಬೆಳವಣಿಗೆಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ. ಮೈಸೂರಿನಲ್ಲಿ ಈ ಪ್ರತಿಭಾನ್ವೇಷಣೆಯನ್ನು ಆಯೋಜಿಸಲು ನಾವು ಹೆಮ್ಮೆಪಡುತ್ತೇವೆ. ಇದು ಮೈಸೂರು ವಾರಿಯರ್ಸ್ ಅನ್ನು ಪ್ರತಿನಿಧಿಸುವ ಅವಕಾಶವನ್ನು ಆಟಗಾರರಿಗೆ ಒದಗಿಸುತ್ತಿದೆ. ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವುದು, ಆಯ್ಕೆ ಮಾಡುವುದು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವರಿಗೆ ಸಮಗ್ರ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ’ ಎಂದು ತಿಳಿಸಿದ್ದಾರೆ.
::: 6 ತಂಡಗಳ ಪೈಪೋಟಿ :::
ಐಪಿಎಲ್ ಮಾದರಿಯಿಂದ ಸ್ಫೂರ್ತಿ ಪಡೆದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಈ ವರ್ಷ ಆರು ತಂಡಗಳ ನಡುವಿನ ತೀವ್ರ ಪೈಪೋಟಿಯ 20-20 ಪಂದ್ಯಾವಳಿಯನ್ನು ಆಯೋಜಿಸಲು ಸಿದ್ಧವಾಗಿದೆ. ಎನ್‌ಆರ್ ಗ್ರೂಪ್ ಹಲವು ವರ್ಷಗಳಿಂದ ತನ್ನ ಬ್ರ‍್ಯಾಂಡ್ ಸೈಕಲ್ ಪ್ಯೂರ್ ಅಗರವಬತ್ತಿಗೆ ಹೆಸರುವಾಸಿಯಾಗಿದೆ, ಭಾರತದಾದ್ಯಂತ ಕ್ರಿಕೆಟ್ ಪಾಲುದಾರಿಕೆಯಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿದೆ. ರೆಡ್ ಅಲರ್ಟ್, ಥರ್ಡ್ ಅಂಪೈರ್ ಬ್ರ‍್ಯಾಂಡಿಂಗ್ ಮತ್ತು ಮೈಲ್‌ಸ್ಟೋನ್ ಬ್ರ‍್ಯಾಂಡಿಂಗ್‌ನಂತಹ ಉತ್ತೇಜಕ ಕ್ರಿಕೆಟ್ ಉಪಕ್ರಮಗಳಲ್ಲಿ ಬ್ರ‍್ಯಾಂಡ್ ತನ್ನನ್ನು ತೊಡಗಿಸಿಕೊಂಡಿದೆ.
ಇದಲ್ಲದೆ, ಸೈಕಲ್ ಪ್ಯೂರ್ ಅಗರಬತ್ತಿಯು ಪ್ರತಿ ವರ್ಷ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಿಗೆ ಪ್ರಮುಖ ಪ್ರಾಯೋಜಕನಾಗಿ ಸತತವಾಗಿ ಸೇವೆ ಸಲ್ಲಿಸಿದೆ ಮತ್ತು ಅವರು ಇತ್ತೀಚೆಗಿನ ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗಾಗಿ ಪ್ರತಿಷ್ಠಿತ ಶೀರ್ಷಿಕೆ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ ಎಂದು ಅರ್ಜುನ್ ರಂಗ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಜು.29 ರಂದು ಬೆಳಗ್ಗೆ 8 ಗಂಟೆಯಿಂದ ಮೈಸೂರಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಪ್ರತಿಭಾನ್ವೇಷಣೆಯ ಟ್ಯಾಲೆಂಟ್ ಹಂಟ್ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮಧುಸೂಧನ್ 9986024717 ಹಾಗೂ ಅರುಣ್ 9632976696 ನ್ನು ಸಂಪರ್ಕಿಸಬಹುದಾಗಿದೆ.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*