ಮಡಿಕೇರಿ ಜು.27 : ಕಾರ್ಗಿಲ್ ದಿವಸ್ ಅಂಗವಾಗಿ ಮಾಜಿ ಸೈನಿಕ ಹಾಗೂ ಶಿವು ಸೈನಿಕ್ ಅಕಾಡೆಮಿ ವತಿಯಿಂದ ಪಿರಿಯಾಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು.ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಸೈನಿಕ್ ಅಕಾಡೆಮಿ ಅಧ್ಯಕ್ಷ ರಾವಂದೂರು ಶಿವು ಕಾರ್ಗಿಲ್ ಯುದ್ಧದಲ್ಲಿ ಸುಮಾರು 47 ಯೋಧರು ಹುತಾತ್ಮರಾಗುವ ಮೂಲಕ ನಮ್ಮ ದೇಶವನ್ನು ರಕ್ಷಿಸಿದ್ದಾರೆ. ಗಡಿಯಲ್ಲಿ ದೇಶ ಕಾಯುತ್ತಿರುವ ಪ್ರತಿಯೊಬ್ಬ ಸೈನಿಕನಿಗೂ ಗೌರವ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ, ಮತ ಮತ್ತು ಧರ್ಮಗಳ ಹೆಸರಿನಲ್ಲಿ ಕಲಹ ನಡೆಸದೆ ಒಗ್ಗಟ್ಟನಿಂದ ದೇಶವನ್ನು ಕಟ್ಟಬೇಕು. ದೇಶ ಮತ್ತು ದೇಶದ ಕಾನೂನಿಗೆ ಗೌರವ ನೀಡಬೇಕು ಎಂದು ಕರೆ ನೀಡಿದರು.
ಅಕಾಡಮಿ ಉಪಾಧ್ಯಕ್ಷ ಸ್ವಾಮಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಜೆ.ಅಶೋಕ್, ಮುಖಂಡ ಎಲೆ ಮಂಜು, ಮಾಜಿ ಸೈನಿಕರಾದ ಮಲ್ಲಯ್ಯ, ಮಂಜುನಾಥ್, ಜವರೇಗೌಡ ವಿದ್ಯಾರ್ಥಿಗಳಾದ ಕಿಶೋರ್, ಪ್ರಜ್ವಲ್, ಆದರ್ಶ್, ಮನೋಜ್, ಕಿರಣ್, ಸಂತೋಷ್, ಸುಮಂತ್, ಚಂದನ್ ಸೇರಿದಂತೆ ಮತ್ತಿತರರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.












