ಮಡಿಕೇರಿ ಜು.27 : ಮಾಯಮುಡಿ ಗ್ರಾ.ಪಂ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಯಮುಡಿ ಗ್ರಾ.ಪಂ ಗೆ ನಾಲ್ಕು ಬಾರಿ ಮಾಯಮುಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಾಟು ಮೊಣ್ಣಪ್ಪ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
ಒಂದು ಅವಧಿಗೆ ಕಿರುಗೂರು ಕ್ಷೇತ್ರದಿಂದ ವಿರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ಉಪಾಧ್ಯಕ್ಷರಾಗಿ ಮಾಯಮುಡಿ ಗ್ರಾ.ಪಂ ಗೆ ಎರಡು ಬಾರಿ ಆಯ್ಕೆಯಾಗಿದ್ದ ಪಿ.ಎಸ್.ಶಾಂತ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ಸಚಿನ್ ಕಾರ್ಯನಿರ್ವಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ನಿರ್ಗಮಿತ ಅಧ್ಯಕ್ಷರಾದ ಎಂ.ಪಿ.ಮೀನಾ, ಉಪಾಧ್ಯಕ್ಷರಾದ ಕೆ.ವಿ.ಸುಮಿತ್ರ, ಸದಸ್ಯರುಗಳಾದ ಆಪಟ್ಟೀರ ವಿಠಲ ನಾಚಯ್ಯ, ಟಿ.ಸಿ.ನಾರಾಯಣ, ಕೆ.ಕೆ.ಶಭರಿಷ್, ವಲಯ ಕಾಂಗ್ರೆಸ್ ಅಧ್ಯಕ್ಷರಾರ ಸಿ.ಕೆ.ಚಿಣ್ಣಪ್ಪ, ಸಣ್ಣವಂಡ ಎಂ.ವಿಶ್ವನಾಥ್, ನಾಮೇರ ನರೇಶ್ ವಿಶ್ವನಾಥ್, ಆಪಟ್ಟೀರ ಅರುಣ, ಆಪಟ್ಟೀರ ಅಯ್ಯಪ್ಪ, ಸಿದ್ದಪ್ಪ, ಹೆಚ್.ಆರ್.ಸುಶೀಲ, ವಿನೋದ್ ಕುಮಾರ್ ಸೇರಿದಂತೆ ಹದಿನೈದು ಮಂದಿ ಗ್ರಾ.ಪಂ ಸದಸ್ಯರು ಹಾಜರಿದ್ದರು.









