ಮಡಿಕೇರಿ ಜು.27 : ಹಾಕಿ ಕ್ರೀಡಾ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುವ ನಾಪೋಕ್ಲುವಿನಲ್ಲಿ ಯುವ ಪ್ರತಿಭೆಗಳಿಗೆ ಅನುಕೂಲವಾಗುವಂತೆ ಕ್ರೀಡಾ ಶಾಲೆ ಮತ್ತು ಆಸ್ಟ್ರೋ ಟರ್ಫ್ ಮೈದಾನ ನಿರ್ಮಿಸಬೇಕೆಂದು ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸರ್ಕಾರವನ್ನು ಆಗ್ರಹಿಸಿದರು.
ನಾಪೋಕ್ಲುವಿನಲ್ಲಿ ಇಲ್ಲಿಯವರೆಗೆ ನಾಲ್ಕು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗಳು ನಡೆದಿದ್ದು, ಮುಂಬರುವ ವರ್ಷಗಳಲ್ಲಿ ಇನ್ನೂ ಕೆಲ ಕುಟುಂಬಗಳಿಂದ ಪಂದ್ಯಾವಳಿ ನಡೆಯಲಿದೆ. ಹಾಕಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಕಂಡು ಬರುವ ಈ ವಿಭಾಗದಲ್ಲಿ ಕ್ರೀಡಾ ಶಾಲೆ, ಆಸ್ಟ್ರೋ ಟರ್ಫ್ ಸೌಲಭ್ಯ ಒದಗಿಸಿದಲ್ಲಿ, ರಾಷ್ಟ್ರೀಯ ತಂಡವನ್ನು ಮತ್ತಷ್ಟು ಯುವ ಪ್ರತಿಭೆಗಳು ಪ್ರತಿನಿಧಿಸಲು ಅವಕಾಶ ದೊರಕಿದಂತಾಗುತ್ತದೆ ಎಂದರು.







