ಮಡಿಕೇರಿ ಜು.27 : ಕೊಡವ ಕುಟುಂಬಗಳ ನಡುವಿನ 23ನೇ ವರ್ಷದ `ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ-2023’ಕ್ಕೆ ಸರ್ಕಾರದ ಮೂಲಕ ಅನುದಾನ ಬಿಡುಗಡೆಗೊಳಿಸಲು ಸಹಕರಿಸಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ಕೆ.ಜಿ.ಬೋಪಯ್ಯ ಅವರ ನಿವಾಸಕ್ಕೆ ಭೇಟಿ ಮಾಡಿ ಸನ್ಮಾನಿಸಿದ ಕುಟುಂಬದ ಪ್ರಮುಖರು, ಅನುದಾನ ಬಿಡುಗಡೆಗೆ ಸಹಕಾರ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಕುಟುಂಬಸ್ಥರು ಹಾಗೂ ಹಾಕಿ ಉತ್ಸವ ಸಮಿತಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಉಪಾಧ್ಯಕ್ಷ ರಾಜ ಭೀಮಯ್ಯ, ಸದಸ್ಯರಾದ ಶಾಮ್ ಕಾಳಯ್ಯ, ಡಾಲಿ ಬೋಪಯ್ಯ, ರವಿ ಮೊಣ್ಣಪ್ಪ, ಪೂದೇವಯ್ಯ, ಎ.ಕೆ.ಸೋಮಯ್ಯ, ಎ.ಕೆ.ತಿಮ್ಮಯ್ಯ, ಎ.ಕೆ.ಜೋಯಪ್ಪ, ಎ.ಇ.ಜನತ್ ಕುಮಾರ್, ಎ.ಬಿ.ವಸಂತ್ ಮುತ್ತಪ್ಪ, ಎ.ಬಿ.ಉದಯ ನಾಚಪ್ಪ ಹಾಜರಿದ್ದರು.











