ಮಡಿಕೇರಿ ಜು.29 : ಬೆಟ್ಟಗೇರಿಯ ಓಂ ಯುವಕ ಸಂಘದ ಕ್ರೀಡಾ ಸಮಿತಿ ವತಿಯಿಂದ 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ “ಹಿಂದು ಕಪ್” ಸಂಭ್ರಮದಿಂದ ನಡೆಯಿತು.
ಅರ್ವತ್ತೋಕ್ಲುವಿನ (ಅಪ್ಪಂಗಳ) ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ಕೆಸರುಗದ್ದೆ ಹಗ್ಗಜಗ್ಗಾಟ, ಕ್ರಿಕೆಟ್, ರಿಲೆ, ವಯೋಮಿತಿಯ ಓಟಗಳು ಗಮನ ಸೆಳೆಯಿತು.









