ಮಡಿಕೇರಿ ಜು.30 : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಶೀರ್ಷಿಕೆಯೊಂದಿಗೆ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದಂದು SYS ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನೆಲ್ಯಾಹುದಿಕೇರಿಯಲ್ಲಿ ನಡೆಯಲಿರುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದ ಪ್ರಚಾರ SKSSF ಶಾಖಾ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಕಾರ್ಯಕ್ರಮದಲ್ಲಿ SYS ಕೊಡಗು ಜಿಲ್ಲಾಧ್ಯಕ್ಷರಾದ ಬಶೀರ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ, ಪ್ರಮುಖರಾದ ಉಮರ್ ಫೈಝಿ, ಕುಂಜ್ಞಾಪ ಹಾಜಿ, ಕೊಡ್ಲಿಪೇಟೆ ಶಾಖಾಧ್ಯಕ್ಷರಾದ ಇಬ್ರಾಹಿಂ ಮಲ್ಲಳ್ಳಿ, ಕೋಶಾಧಿಕಾರಿ ಅಬ್ದುಲ್ ರಹಮಾನ್, ಅಬ್ದುಲ್ ಬಾಸಿತ್, ಸಾಬ್ ಜಹಾನ್ ಹಾಗೂ ಶಾಖೆಯ ಇತರ ಸದಸ್ಯರುಗಳು ಭಾಗವಹಿಸಿದ್ದರು.