ಮಡಿಕೇರಿ ಆ.6 : ಕೊಡವ ಕೂಟಾಳಿಯಡ ಕೂಟ ಸಂಘಟನೆಯು ಇತ್ತೀಚೆಗೆ ಕೊಡವ ಮಕ್ಕಳಿಗಾಗಿ ಆನ್ಲೈನ್ ನಲ್ಲಿ *ಕೊಡಗ್’ರ ಚುಪ್ಪಿ ಕೋಗಿಲೆಯ-ಭಾಗ -3″* ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೊಡಗು ಜಿಲ್ಲೆಯಲ್ಲದೆ ಬೇರೆ ಜಿಲ್ಲೆಯಿಂದ ಹಲವಾರು ಪುಟ್ಟ ಕೊಡವ ಮಕ್ಕಳು ಈ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ತೀರ್ಪುಗಾರರು 15 ಮಕ್ಕಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು.
ಎರಡನೆ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳ ಪೈಕಿ ಮೊದಲನೇ ಬಹುಮಾನ ರೂ. 25೦೦/ನಗದು ಮತ್ತು *ಕೊಡಗ್’ರ ಚುಪ್ಪಿ ಕೋಗಿಲೆ* ಎನ್ನುವ ಬಿರುದನ್ನು ನಾಪೋಕ್ಲುವಿನ ಚೀಯಕ್’ಪೂವಂಡ ಸ್ವರ ತಂಗಮ್ಮ ತನ್ನದಾಗಿಸಿಕೊಂಡರು. ಎರಡನೆ ಬಹುಮಾನ ರೂ. 2೦೦೦/ನಗದನ್ನು ಕಾಂಡಂಡ ಪರಿಧಿ ಪೂವಮ್ಮ , ನಾಪೋಕ್ಲು ಹಾಗೂ ಮೂರನೇ ಬಹುಮಾನ ರೂ. 15೦೦/ ವನ್ನು ತಾಪಂಡ ಹರ್ಷಿತ್ ಪೊನ್ನಪ್ಪ ಪಡೆದುಕೊಂಡರು.
ಉಳಿದಂತೆ ಚೆಯ್ಯಂಡ ದೇಶಿಕ್ ನವೀನ್ ಚೆಯ್ಯಂಡಾಣೆ, ಕೊಟ್ಟಂಗಡ ಅನ್ವಿತ ಬೊಳ್ಳಮ್ಮ ಬಲ್ಯಮಂಡೂರ್, ಕಾಂಡಂಡ ಯಶ್ನ ಪೊನ್ನಕ್ಕ ಕೊಳಕೇರಿ, ನೆಲ್ಲಚಂಡ ಪೊನ್ನಮ್ಮ ನಲ್ವತೊಕ್ಲು,
ಮಾದಂಡ ದೀತ್ಯಾ ಕಾವೇರಿ ವಿರಾಜಪೇಟೆ, ಬಾಚಿರ ಅದ್ವಿಕ ಕುಶಾಲಪ್ಪ ಹರಿಹರ,
ಬಾಚಂಗಡ ಕೀರ್ತನ್ ಕರುಂಬಯ್ಯ ಬೆಂಗಳೂರು ಮೊದಲ ಹತ್ತು ಸ್ಥಾನಕ್ಕೆ (ಟಾಪ್ ಟೆನ್) ಆಯ್ಕೆಯಾಗಿದ್ದಾರೆ.
ಎರಡನೇ ಸುತ್ತಿನಲ್ಲಿ ಭಾಗವಹಿಸಿ ಅಧಿಕ ಅಂಕ ಗಳಿಸಿದ ಹತ್ತು ಮಕ್ಕಳಿಗೆ , ಹಾಗೂ ಚುಪ್ಪಿ ಕೋಗಿಲೆಯ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿಗೆ ಭಾಗವಹಿಸಿದ ಮಕ್ಕಳಿಗೆ ವಿಶೇಷ ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಲಾಗುವುದು.
ಈ ಗಾಯನ ಸ್ಪರ್ಧೆಗೆ ಶ್ರೀಮತಿ ಪ್ರಮೀಳ, ಬೆಂಗಳೂರು, ಶ್ರೀಮತಿ ಕಬ್ಬಚ್ಚಿರ ಸುಮಾ ನಾಚಪ್ಪ ಆರ್ಜಿ, ಹಾಗೂ ಚೆಯ್ಯಂಡ ಶಿಲ್ಪ ನವೀನ್, ಚೆಯ್ಯಂಡಾಣೆ ಇವರುಗಳು ಬಹುಮಾನ ಪ್ರಾಯೋಜಕತ್ವ ನೀಡಿದ್ದರು.
ತೀರ್ಪುಗಾರರಾಗಿ ಗಾಯಕಿರಾದ ಶ್ರೀಮತಿ ಚೇಂದಿರ ನಿರ್ಮಲ ಬೋಪಣ್ಣ ಹಾಗೂ ಶ್ರೀಮತಿ ಮೇವಡ ಕಾವೇರಿ ಸೋಮಯ್ಯ ಪಾಲ್ಗೊಂಡಿದ್ದರು.
ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಹಾಗೂ ನಿರ್ದೇಶಕ ಕಾಂಗಿರ ಸಂತೋಷ್ ದೇವಯ್ಯ ಕಾರ್ಯಕ್ರಮ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು ಎಂದು ಕೂಟದ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ತಿಳಿಸಿದ್ದಾರೆ.
Breaking News
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*
- *ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ : ಉತ್ತಮ ವೇತನ*
- *ಜ.25 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗಿಗೆ ಭೇಟಿ
- *ಜ.29 ರಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಭೆ*
- *ಪುಟಾಣಿ ವಿಜ್ಞಾನ ಪರೀಕ್ಷೆ : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕೊಡಗು ಔಷಧಿ ವ್ಯಾಪಾರಿಗಳ ಸಂಘದಿಂದ ರಕ್ತಸಂಗ್ರಹಣಾ ಶಿಬಿರ : ಔಷಧೀಯ ಅಂಶ ಹೊಂದಿರವ ರಕ್ತದ ದಾನಕ್ಕೆ ಸವ೯ರೂ ಮುಂದಾಗಿ : ಗುರುನಾಥ್ ಕರೆ*
- *ಬೇಟೋಳಿಯಲ್ಲಿ ಮಕ್ಕಳ ಗ್ರಾಮಸಭೆ*
- *ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ*
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು-ಸಿದ್ದಾಪುರ ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*