ಮಡಿಕೇರಿ ಆ.11 : ಗ್ರಾಮೀಣ ಪುನರ್ವಸತಿ ಯೋಜನೆಯಡಿ ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ, ಕುಂಜಿಲ, ಕೊಣಂಜಗೇರಿ ಹಾಗೂ ಕಡಗದಾಳು ಮತ್ತು ವಿರಾಜಪೇಟೆ ತಾಲ್ಲೂಕಿನ ದೇವರಪುರ, ನಿಟ್ಟೂರು, ಪೊನ್ನಪ್ಪಸಂತೆ, ಕೆ.ಬಾಡಗ, ಕಿರುಗೂರು, ಶ್ರೀಮಂಗಲ ಹಾಗೂ ನಾಲ್ಕೇರಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿಆರ್ಡಬ್ಲ್ಯೂ) ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಸಲ್ಲಿಸಲು ಸೆ.11 ಕೊನೆಯ ದಿನವಾಗಿದೆ. ವಿದ್ಯಾರ್ಹತೆ ಎಸ್ಎಸ್ಎಲ್ಸಿ ಉತ್ತೀರ್ಣ/ ಅನುತ್ತೀರ್ಣ, ವಿಕಲಚೇತನತೆ ಪ್ರಮಾಣ ಶೇ.40 ಕ್ಕಿಂತ ಮೇಲ್ಪಟ್ಟು ಶೇ.75 ಕ್ಕಿಂತ ಕಡಿಮೆ ಇರಬೇಕು. 18 ರಿಂದ 45 ವರ್ಷ ವಯೋಮಾನದವರಾಗಿರಬೇಕು.
ಅರ್ಜಿ ನಮೂನೆಗಳನ್ನು ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಗಳಲ್ಲಿರುವ ಎಂಆರ್ಡಬ್ಲ್ಯುಗಳಿಂದ ಉಚಿತವಾಗಿ ಪಡೆದು ನಿಗದಿತ ದಿನಾಂಕದೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.









