ಮಡಿಕೇರಿ ಆ.11 : ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾ.ಪಂ ಅಧ್ಯಕ್ಷರಾಗಿ ಕೆ.ಡಿ.ಪಾರ್ವತಿ ಹಾಗೂ ಉಪಾಧ್ಯಕ್ಷರಾಗಿ ಬಿ.ಎಂ.ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
6 ಬಿಜೆಪಿ ಬೆಂಬಲಿತ ಮತ್ತು 4 ಕಾಂಗ್ರೆಸ್ ಬೆಂಬಲಿತರು ಸೇರಿ ಒಟ್ಟು ಹತ್ತು ಸದಸ್ಯ ಬಲದ ಗ್ರಾ.ಪಂ ಯ ಎರಡನೇ ಅವಧಿಯ ಅಧಿಕಾರಕ್ಕಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 9 ಸದಸ್ಯರು ಹಾಜರಿದ್ದರು.
ಬಿಜೆಪಿ ಬೆಂಬಲಿತ ಕೆ.ಡಿ.ಪಾರ್ವತಿ ಹಾಗೂ ಬಿ.ಎಂ.ಸತೀಶ್ ಅವಿರೋಧವಾಗಿ ಆಯ್ಕೆಯಾದರು.
::: ರಾಜೀನಾಮೆ :::
ಈ ನಡುವೆ ಬಿಜೆಪಿ ಬೆಂಬಲಿತ ಸದಸ್ಯೆ ಉದಿಯಂಡ ರೀಟಾ ಮುತ್ತಣ್ಣ ಅವರು ತಮ್ಮ ಗ್ರಾ.ಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರಸಂಗವೂ ನಡೆಯಿತು. ತಮಗೆ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾ.ಪo ಮಾಜಿ ಅಧ್ಯಕ್ಷರಾದ ಡೀನ್ ಬೋಪಣ್ಣ, ಕೊಕ್ಕಲೆರ ಅಯ್ಯಪ್ಪ, ಸದಸ್ಯರಾದ ರಘು, ಕಾಂಗ್ರೆಸ್ ಬೆಂಬಲಿತರಾದ ಜಾನ್ಸನ್ ಪಿಂಟೋ, ಪುಷ್ಪಲತಾ, ಅನಿತಾ ಮತ್ತಿತರರು ಈ ಸಂದರ್ಭ ಹಾಜರಿದ್ದರು.










