ಮಡಿಕೇರಿ.ಆ.12 : ಕೊಡಗು ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಜಿನ ನಗರಿ ಛಾಯಾಗ್ರಾಹಕ ಸಂಘದ ಆಶ್ರಯದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಆ.19 ರಂದು ಮಡಿಕೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಗುಡ್ಡೆಹೊಸೂರಿನ ಹಾಲು ಉತ್ಪಾದಕ ರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮುರಳೀಧರ್, ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘ ದ ಅಧ್ಯಕ್ಷ ರಾದ ವಸಂತ್ ಅವರ ಸಮ್ಮುಖದಲ್ಲಿ ಈ ಸಭೆ ನಡೆಸಲಾಯಿತು. ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ಜಿ.ವಿ.ರವಿ ಕುಮಾರ್, ಛಾಯಾಗ್ರಾಹಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಲಮಾನ್ ಡೇವಿಡ್, ದಕ್ಷಿಣ ಕೊಡಗು ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಡಾಡು ಜೋಸೆಫ್, ಪುಷ್ಪ ಗಿರಿ ಛಾಯಾಗ್ರಾಹಕ ರ ಸಂಘ ದ ಅಧ್ಯಕ್ಷರಾದ ಎಸ್. ಸುಬ್ರಮಣಿ, ಕಾವೇರಿ ಛಾಯಾಗ್ರಾಹಕ ರ ಸಂಘ ದ ಅಧ್ಯಕ್ಷ ರಾದ ವಿ.ಜಿ.ಕುಮಾರ್, ಮಂಜಿನ ನಗರಿ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಪ್ರದೀಪ್, ಜಿಲ್ಲಾ ಛಾಯಾಗ್ರಾಹಕ ರ ಸಂಘ ದ ಉಪಾಧ್ಯಕ್ಷ ರಾದ ಜರ್ನಾಧನ, ಮಾಜೀ ಅಧ್ಯಕ್ಷ ರಾದ ಸುರೇಶ್ ಮಾವುಟ್ಕರ್ , ಕೊಡಗು ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಖಜಾಂಜಿ ಟಿ.ಕೆ.ಸಂತೋಷ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿ ಕಾರ್ಯದರ್ಶಿ ಅರುಣ್ ಕೂಗ್೯ ಕುಮಾರ್, ಸದಸ್ಯರಾದ ವಿಶ್ವ ಗುಡ್ಡೆಮನೆ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.









