ಮಡಿಕೇರಿ ಆ.12 : ಕರ್ನಾಟಕ ಸರ್ಕಾರದ ಹೆಚ್ಚುವರಿ ಅಭಿಯೋಜಕರಾಗಿ ವಿರಾಜಪೇಟೆಯ ವಕೀಲ ಕರ್ನಂಡ ರಾಹುಲ್ ಕಾರ್ಯಪ್ಪ ನೇಮಕಗೊಂಡಿದ್ದಾರೆ.
ವಿರಾಜಪೇಟೆಯ ಕರ್ನಂಡ ಸೋಮಯ್ಯ ಮತ್ತು ಪದ್ಮಿನಿ ದಂಪತಿ ಪುತ್ರ ಕರ್ನಂಡ ರಾಹುಲ್ ಕಾರ್ಯಪ್ಪ, ವಕೀಲ ವೃತ್ತಿಯಲ್ಲಿ 23 ವರ್ಷಗಳ ಅನುಭವ ಹೊಂದಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಅವರ ಗರಡಿಯಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ನಾಗರಿಕರ ಕಾನೂನುಗಳು, ಕ್ರಿಮಿನಲ್, ಆಡಳಿತಾತ್ಮಕ ಕಾನೂನುಗಳು ಮತ್ತು ಚುನಾವಣಾ ಕಾನೂನು ಕ್ಷೇತ್ರಗಳಲ್ಲಿ ಅಭ್ಯಸಿಸಿದ್ದಾರೆ.








