ಮಡಿಕೇರಿ ಆ.12 : ದೇವಾಲಯ ಹುಂಡಿಯಿಂದ ಹಣ ಕಳ್ಳತನ ಮಾಡಿರುವ ಪ್ರಕರಣ ವಿರಾಜಪೇಟೆಯ ಸುಣ್ಣದ ಬೀದಿ ಬಡಾವಣೆಯಲ್ಲಿ ನಡೆದಿದೆ.
ತುಳಸಿ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಸುಮಾರು 30 ಸಾವಿರ ರೂ. ಕಾಣಿಕೆ ಹಣ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ವಿರಾಜಪೇಟೆ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನ ಮತ್ತು ವಾಹನ ಸಂಚಾರದ ಪ್ರದೇಶದಲ್ಲೇ ಕಳ್ಳತನ ನಡೆದಿದ್ದು, ಚೋರರ ಪತ್ತೆಗೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.









