ಮಡಿಕೇರಿ ಆ.22 : ಮೈಸೂರು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆ.30 ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಸ್ನಾತಕೋತ್ತರ ಸಾಮಾನ್ಯ ಪರೀಕ್ಷೆಯ ಉಚಿತ ಅಣುಕು ತರಬೇತಿ ನಡೆಯಲಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಎ.ಎಂ.ಅನಿರುದ್ಧ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪಿಜಿಸಿಇಟಿ ಗೆ ಹಾಜರಾಗುವ ಮೂಲಕ ಸ್ನಾತಕೋತ್ತರ ಕೋರ್ಸ್‍ಗಳ (ಎಂಸಿಎ-ಎಂಬಿಎ) ಪ್ರವೇಶ ಬಯಸುವ ಪದವೀಧರರಿಗೆ ಈ ಅಣುಕು ಪರೀಕ್ಷೆ ಸಹಕಾರಿಯಾಗಲಿದ್ದು, ಅಣುಕು ಪಿಜಿಸಿಇಟಿ ನೈಜ ಪರೀಕ್ಷೆಯನ್ನೇ ಅನುಸರಿಸುತ್ತದೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಆಯಾ ವಿಷಯಗಳ ತಜ್ಞ ಶಿಕ್ಷಕರು ತಯಾರಿಸುತ್ತಾರೆ ಎಂದು ಮಾಹಿತಿ ನೀಡಿದರು.
ಆಸಕ್ತ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಗೆ ಸ್ಥಳಕ್ಕೆ ಹಾಜರಾಜರಾಗುವಂತೆ ಮಾಹಿತಿ ನೀಡಿದ ಅವರು, ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಎಂಸಿಎ ಆಕಾಂಕ್ಷಿಗಳು https://forms.gle/Ds3MU51BZNtrTu199 ಹೆಚ್ಚಿನ ವಿವರಗಳಿಗಾಗಿ 9620228107, ಎಂಬಿಎ ಆಕಾಂಕ್ಷಿಗಳು https://forms.gle/apV2u8jhCyj3t36X9 ಹೆಚ್ಚಿನ ವಿವರಗಳಿಗಾಗಿ 9886414144 ಸಂಪರ್ಕಿಸುವಂತೆ ಅನಿರುದ್ಧ ತಿಳಿಸಿದರು.
ಆ.28 ರಿಂದ ಸೆ.1 ರ ವರೆಗೆ ಐದು ದಿನಗಳ ಕಾಲ ಡಿಸಿಇಟಿಯ ಉಚಿತ ತರಬೇತಿಗಳನ್ನು ಆಯೋಜಿಸಲಾಗಿದ್ದು, ತರಗತಿಗಳನ್ನು ಪ್ರತಿ ವಿಭಾಗದಲ್ಲಿನ ನುರಿತ ಹಾಗೂ ತಜ್ಞ ಪ್ರಾಧ್ಯಾಪಕರು ಸಂಪೂರ್ಣವಾಗಿ ಸಿದ್ಧಪಡಿಸಿದ ಅಧ್ಯಯನ ಸಾಮಾಗ್ರಿಗಳೊಂದಿಗೆ ನಿರ್ವಹಿಸುತ್ತಾರೆ. ತರಬೇತಿ ತರಗತಿ ದಿನಗಳಲ್ಲಿ ಮೈಸೂರು ಮತ್ತು ಸುತ್ತಮುತ್ತಲಿನ ತಾಲೂಕುಗಳಿಂದ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.
ಡಿಸಿಇಟಿ ಆಕಾಂಕ್ಷಿಗಳು https://forms.gle/YzsJ1vfXLaEKrBAp9 ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9480839634 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಪ್ರೊ. ಬಿ.ಮಂಜುನಾಥ್, ಡಾ.ಮಹಮ್ಮದ್ ಕೈಸರ್ ಉಪಸ್ಥಿತರಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*