ಮುಂಡ್ಕೂರು ಶಾಂಭವಿ ನದಿಯ ದಡದಲ್ಲಿ ಒಂದು ಸುಂದರವಾದ ದೇವಸ್ಥಾನವಿರುವ ಸ್ಥಳ . ಇದು ಕಾರ್ಕಳ ತಾಲೂಕಿನ , ಉಡುಪಿ ಜಿಲ್ಲೆಯಲ್ಲಿದೆ.
ಮುಂಡ್ಕೂರು ದೇವಸ್ಥಾನವು ಶ್ರೀ ದುರ್ಗಾಪರಮೇಶ್ವರಿಯ ದೇವಸ್ಥಾನವಾಗಿದ್ದು, ಇದಕ್ಕೆ 1300 ವರ್ಷಗಳಷ್ಟು ಇತಿಹಾಸವಿದೆ.
ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿಯು ಮಹಿಷಮರ್ಧಿನಿಯ ರೂಪದಲ್ಲಿದ್ದು, ತ್ರಿಶೂಲಧಾರಿಯಾಗಿ ಮಹಿಷನನ್ನು ಮರ್ಧಿಸುವ ರೂಪದಲ್ಲಿದೆ. ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರಿ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು ಎಂದು ಪ್ರಸಿದ್ಧಿ ಪಡೆದಿದೆ. ಸ್ಥಳ ಪುರಾಣ ಅರಿತ ಭಾರ್ಗವ ಋಷಿಗಳು ಸುರಥ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ಧಿನಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಕಾಲಕ್ರಮೇಣ ಜೈನ ವಂಶದ ವೀರವರ್ಮ ಎಂಬ ರಾಜನ ಆಳ್ವಿಕೆಯ ಸಂಧರ್ಭದಲ್ಲಿ ಮಂಜಪ್ಪ ಅಜ್ರಿ ಎಂಬ ದುಷ್ಟ ಮಂತ್ರಿಯ ದುರುಪದೇಶ ರಾಜ್ಯಾದ್ಯಂತ ಅನ್ಯಾಯ, ಅಕ್ರಮ, ಅರಾಜಕತೆಗಳು ತಾಂಡವವಾಡ ತೊಡಗಿದವು. ಶಾಂಭವಿ ನದಿಯ ಪಶ್ಚಿಮದಲ್ಲಿರುವ ಉಳೆಪಾಡಿ ಗ್ರಾಮದ ಗುಡ್ಡೆಸಾನ ಎಂಬಲ್ಲಿ ದೈವಾಂಶ ಸಂಭೂತರಾದ ಕಾಂತ ಬಾರೆ ಬೂದ ಬಾರೆ ಎಂಬ ವೀರ ಸಹೋದರರಿದ್ದರು. ಪ್ರತಿನಿತ್ಯ ಅವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸುವ ನಿತ್ಯ ಚರ್ಯೆಯನ್ನು ಇಟ್ಟುಕೊಂಡಿದ್ದರು. ವೀರ ವರ್ಮ ರಾಜನಿಗೆ ಇವರ ನಿತ್ಯದ ಕಾರ್ಯಕ್ರಮವನ್ನು ಆತನ ಸಹಚರರಾಗಿದ್ದ ಶಿವಪ್ಪ ಮುಂಗ್ಲಿ, ಸಿದ್ದಪ್ಪ ಮುಂಗ್ಲಿ ಎಂಬ ಸಹೋದರರು ತಿಳಿಸಿದಾಗ ನೆರೆಯ ಸಂದರ್ಭದಲ್ಲಿ ದೋಣಿಯವರಿಗೆ ಬಾರೆ ಸಹೋದರರನ್ನು ಶಾಂಭವಿ ನದಿ ದಾಟಿಸಬಾರದೆಂದು ಕಟ್ಟಪ್ಪಣೆ ಮಾಡಿಸಿದನಂತೆ.
ಮುಂಡಕೂರು ಮಂಗಳೂರಿನಿಂದ 31 K M ದೂರದಲ್ಲಿದ್ದು ಬಸ್ ವ್ಯವಸ್ಥೆ ಚೆನ್ನಾಗಿದೆ. . ಮುಂಡಕೂರಿಗೆ ಉಡುಪಿಯಿಂದಲೂ ಹೋಗಬಹುದು 36 K M .
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*