ಮಡಿಕೇರಿ ಆ.25 : ಮಡಿಕೇರಿಯ ಮೆಡಿಕಲ್ ಕಾಲೇಜ್ ನಲ್ಲಿ ನಡೆದ ಪ್ರಕರಣದಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದು ವಿದ್ಯಾರ್ಥಿಗಳೊಂದಿಗೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದ್ದಾಗಿದೆ. ಆದರೆ ಅಸಭ್ಯ ವರ್ತನೆಯ ಆರೋಪಿಯೊಂದಿಗೆ ನಮ್ಮ ಹೆಸರನ್ನು ತಳುಕು ಹಾಕಿ ಭಾವಚಿತ್ರ ಸಹಿತ ನಮ್ಮನ್ನು ಆರೋಪಿಗಳಂತೆ ಪ್ರತಿಬಿಂಬಿಸಲಾಗಿದೆ ಎಂದು ಯುವರು ನೋವು ತೋಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಕ ಕೆ.ವಿ.ಕಿರಣ್ ಕುಮಾರ್, ಕಾಲೇಜು ಬಳಿ ಅಸಭ್ಯವಾಗಿ ವರ್ತಿಸಿದ ಆರೋಪಿ ಸಿಜೀಲ್ ಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ. ಆತ ಯಾರೆಂದೇ ನಮಗೆ ತಿಳಿದಿಲ್ಲ, ಆದರೆ ಸಿಜೀಲ್ ಮಾಡಿರಬಹುದಾದ ಪ್ರಕರಣದ ಜೊತೆಯಲ್ಲಿ ನಮ್ಮ ಹೆಸರುಗಳನ್ನು ತಳುಕು ಹಾಕಿರುವುದು ಮಾತ್ರವಲ್ಲದೆ, ನಮ್ಮ ಭಾವಚಿತ್ರಗಳನ್ನು ಕೂಡ ಬಿಡುಗಡೆ ಮಾಡಿರುವುದರಿಂದ ಯಾವುದೇ ತಪ್ಪುಗಳನ್ನು ಮಾಡದ ನಮಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಿದೆ. ಇದರಿಂದ ನಮ್ಮ ಮುಂದಿನ ಜೀವನಕ್ಕೆ ಆತಂಕ ಎದುರಾಗಿದ್ದು, ಯಾವುದೇ ತಪ್ಪು ಮಾಡದ ನಮ್ಮನ್ನು ಸಮಾಜ ತಪ್ಪು ದೃಷ್ಟಿಯಿಂದ ನೋಡುತ್ತಿದೆ ಎಂದರು.
2023 ಆಗಸ್ಟ್ 19 ರಂದು ರಾತ್ರಿ 12.30 ರ ವೇಳೆಗೆ ಹೆಬ್ಬೆಟ್ಟಗೇರಿಯ ಸ್ನೇಹಿತರ ಮನೆಯಲ್ಲಿ ಜನ್ಮ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ಟೆಂಪೋದಲ್ಲಿ ಕಿರಣ್ ಕುಮಾರ್ ಕೆ.ವಿ, ಮನು ಸಿ. ಹಾಗೂ ಬೈಕ್ ನಲ್ಲಿ ಎಸ್.ಪ್ರಶಾಂತ್ ಆದ ನಾವುಗಳು ಮೆಡಿಕಲ್ ಕಾಲೇಜು ಮಾರ್ಗವಾಗಿ ಬರುತ್ತಿದ್ದಾಗ ಆಟೋವೊಂದನ್ನು ನಿಲ್ಲಿಸಿದ್ದ ವಿದ್ಯಾರ್ಥಿಗಳು ಅದರ ಚಾಲಕ ಶೌಕತ್ ಎಂಬುವವರ ಬಳಿ ಮಾತನಾಡುತ್ತಿದ್ದರು. ದಾರಿಗೆ ಅಡ್ಡಲಾಗಿ ವಾಹನಗಳಿದ್ದ ಕಾರಣ ನಾವು ಇದನ್ನು ಪ್ರಶ್ನಿಸಿದೆವು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ನಮ್ಮ ನಡುವೆ ಮಾತುಕತೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ನಡೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ನಮ್ಮನ್ನು ಆರೋಪಿಗಳೆಂದು ಪ್ರತಿಬಿಂಬಿಸಿದ್ದು, ಸಮಾಜದಲ್ಲಿ ನಾವು ತಲೆ ತಗ್ಗಿಸುವಂತ್ತಾಗಿದೆ. ಅಲ್ಲದೆ ಪೋಷಕರಿಗೂ ತುಂಬಾ ನೋವಾಗಿದ್ದು, ಬಾಡಿಗೆ ಮನೆಯ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ.
ನಮಗೆ ಮುಂದಿನ ದಿನಗಳಲ್ಲಿ ಉದ್ಯೋಗ ಮತ್ತು ವ್ಯವಹಾರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಸಭ್ಯವಾಗಿ ವರ್ತಿಸಿದ ಆರೋಪಿ ಸಿಜೀಲ್ ಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆ.19 ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವುಗಳು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಕ್ಷಮೆ ಕೇಳಲು ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿ.ಮನು, ಎಸ್.ಪ್ರಶಾಂತ್ ಉಪಸ್ಥಿತರಿದ್ದರು.
Breaking News
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*