ಮಡಿಕೇರಿ ಆ.28 : ಮಡಿಕೇರಿ ದಸರಾ ಸಮಿತಿಯ 2023 ನೇ ಸಾಲಿನ ಕಾರ್ಯಾಧ್ಯಕ್ಷರಾಗಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರಕಾಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ಇದ್ದ ಕಾರಣ ಇಂದು ನಗರದ ಖಾಸಗಿ ಹೊಟೇಲ್ ಸಂಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಪ್ರಕಾಶ್ ಆಚಾರ್ಯ 9 ಮತಗಳನ್ನು ಗಳಿಸಿದರೆ, ಪ್ರತಿಸ್ಪರ್ಧಿ ಪತ್ರಕರ್ತ ಅನಿಲ್ ಹೆಚ್.ಟಿ ಅವರು 5 ಮತಗಳನ್ನು ಪಡೆದರು.
ಹತ್ತು ಮಂಟಪ ಸಮಿತಿಯ ತಲಾ ಓರ್ವ ಪದಾಧಿಕಾರಿ ಹಾಗೂ 4 ಕರಗ ಸಮಿತಿಯ ಓರ್ವ ಪದಾಧಿಕಾರಿಗಳು ಸೇರಿ ಒಟ್ಟು 14 ಮಂದಿ ಮತದಾನ ಮಾಡಿದರು. ಕಾರ್ಯಾಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರಾಗಿ ಶ್ರೀ ಕೋಟೆ ಮಹಾಗಣಪತಿ ದೇವಾಲಯದ ಬಿ.ಎಂ.ರಾಜೇಶ್, ಸಹ ಕಾರ್ಯದರ್ಶಿಯಾಗಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಜಗದೀಶ್ ಆಯ್ಕೆಯಾದರು.









