ಮಡಿಕೇರಿ ಆ.29 : ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಕಳೆದ ಬಾರಿ 69 ನೇ ಸಹಕಾರ ಸಪ್ತಾಹದಲ್ಲಿ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಮಂಡುವoಡ ಮುತ್ತಪ್ಪ ಅವರನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸನ್ಮಾನಿಸಿ ಗೌರವಿಸಿತು.
ಬೆಂಗಳೂರಿನ ಪ್ರಿನ್ಸೆಸ್ ಗಾಲ್ಫ್ ಅರಮನೆ ಮೈದಾನದಲ್ಲಿ ನಡೆದ 22 ನೇ ಸಂಯುಕ್ತ ಸಹಕಾರಿ ಸಾಮಾನ್ಯ ಸಭೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಸ್ತುತ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.











