ಸುಂಟಿಕೊಪ್ಪ ಆ.30 : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕುಂಞ ಕೃಷ್ಣಪ್ಪ ನೇಮಕಗೊಂಡಿದ್ದಾರೆ.
ಸಂಘದ ಸಂಭಾಗಣದಲ್ಲಿ ಅಧ್ಯಕ್ಷರಾದ ಬಿ.ಎಂ.ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮುನೀರ್ ಕಂಬಿಬಾಣೆ, ಬಿ.ಎ.ಕೃಷ್ಣಪ್ಪ, ಗೌರವ ಅಧ್ಯಕ್ಷರಾಗಿ ಬಿ.ಎಂ.ಪೂವಪ್ಪ, ಹೆಚ್.ಹಂಸ,(ಅಚ್ಚುಪ್ಪ), ಸಹಕಾರ್ಯದರ್ಶಿ ಅಂಬೆಕಲ್ ಚಂದ್ರಶೇಖರ್, ಖಜಾಂಚಿಯಾಗಿ ಆಸೀಸ್, ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್, ಆತಿಕ್, ಕಾರ್ಯಕಾರಿ ಸಮಿತಿಗೆ ಅಣ್ಣಪ್ಪ ಜಿ.ಎಂ. ತರ್ನಶೀರ್, ಪ್ರಕಾಶ್, ಸಲೀಂ, ಮಣಿರಾಜ್(ತಂಬಿ), ಅಸ್ಕರ್, ಸಿ.ಎ.ಬಸಪ್ಪ, ಪವನ್ ಸಂತೋಷ್, ರಾವುಫ್,ಆರ್. ಎಂ.ಕುಮಾರ್, ರಾಜು, ರಫೀಕ್(ಮೋನು), ವಿ.ರಾಜ, ಇಸಾಕ್, ಡಿಸೋಜ, ಅವರನ್ನು ಆಯ್ಕೆಗೊಳಿಸಲಾಯಿತು.









