ಸುಂಟಿಕೊಪ್ಪ ಆ.30 : ಸುಂಟಿಕೊಪ್ಪದ ವಿವಿಧೆಡೆ ಹಿಂದೂ ಮಲಯಾಳಿ ಭಾಂದವರು ಓಣಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸುಂಟಿಕೊಪ್ಪ ವ್ಯಾಪ್ತಿಯ ಗದ್ದೆಹಳ್ಳ, ಕೆದಕಲ್, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ ಮಾದಾಪುರ, ಗರಗಂದೂರು ಇನ್ನಿತರ ಕಡೆಗಳಲ್ಲಿ ಓಣಂ ಅಂಗವಾಗಿ ಹೂವಿನಿಂದ ರಂಗೋಲಿ “ಪೂಕಳಂ” ರಚಿಸಿ ಸಂಭ್ರಮಿಸಿದರು.
ಸುಂಟಿಕೊಪ್ಪ ಸುರೇಶ್ ಗೋಪಿ ಮನೆಯಲ್ಲಿ ರಚಿಸಲಾಗಿದ್ದ ಪೂಕಳಂ ಗಮನ ಸೆಳೆಯಿತು.