ಮಡಿಕೇರಿ ಆ.30 : ಸ್ನೇಹಾಚರದ ಸಂಕೇತವಾದ ರಕ್ಷಾ ಬಂಧನ ಕಾರ್ಯಕ್ರಮದ ಅಂಗವಾಗಿ ಓಬಿಸಿ ಘಟಕದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ವಿರಾಜಪೇಟೆ ನಗರ ಬಿಜೆಪಿಯ ಅಂಗವಾದ ಓಬಿಸಿ ಘಟಕದ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹೆಣ್ಣು ಹಂಪಲು ವಿತರಿಸಿದರು.
ನಂತರ ಮಾತನಾಡಿದ ನಗರ ಓಬಿಸಿ ಘಟಕದ ಅದ್ಯಕ್ಷ ಸುರೇಶ್ ಚಾಮಿ, ಭಾತೃತ್ವದ ಸಂಕೇತವಾದ ರಕ್ಷಾ ಬಂಧನವು ಸಂಬಂಧದ ಪ್ರತಿಕವಾಗಿದೆ. ನಾಡಿನ ಸರ್ವ ಜನರು ಸುಖ ಶಾಂತಿಯಿಂದ ಜೀವನ ಮಾಡಬೇಕು. ಸಂಬಂಧಗಳು ಅನನ್ಯವಾಗಿರಲು ಮತ್ತು ಗಟ್ಟಿಯಾಗಿರಲು ರಕ್ಷ ಬಂಧನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಹಬ್ಬದ ಆಚರಣೆಯು ಅರ್ಥಪೂರ್ಣವಾಗಿರಬೇಕು ಎಂದರು.
ತಾಲೂಕು ಓಬಿಸಿ ಘಟಕದ ಅಧ್ಯಕ್ಷ ಸಾಯಿನಾಥ್ ನಾಯಕ್ ಮಾತನಾಡಿ, ಸೌಹಾರ್ದಯುತ ಜೀವನ ಸಮಾಜದ ಭಾಗವಾಗಬೇಕು. ಒಳಿತನ್ನು ಬಯಸುವ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ನಗರ ಓಬಿಸಿ ಘಟಕದ ಕಾರ್ಯದರ್ಶಿ ದರ್ಶನ್, ಸಹ ಕಾರ್ಯದರ್ಶಿ ಸುಭಾಷ್, ಅನೀಲ್ ಕುಮಾರ್, ಲೋಕೇಶ್ ಆಚಾರ್ಯ, ಮಂಜು, ಈಶ್ವರ್, ಆಶೋಕ್, ಸೂರಪ್ಪ, ವಿವೇಕ್ ರೈ, ಕುಶಾಲಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.