ಮಡಿಕೇರಿ ಆ.31 : ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಚೀಣಕುಟ್ಟಡ ಎ.ಗಣಪತಿ ನಿಧನರಾದರು.
ಕೆಲವು ದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆ.23 ರಂದು ಕೊನೆಯುಸಿರೆಳೆದರು. ಕೆಂಬಟ್ಟಿ ಜನಾಂಗಕ್ಕೆ ಸೇರಿದ ಇವರು ಜಾನಪದ ಕ್ಷೇತ್ರದಲ್ಲಿ ಕಾಪಾಳ ನೃತ್ಯದಲ್ಲಿ ಹೆಚ್ಚು ಪರಿಣಿತರಾಗಿದ್ದರು.
ಚೀಣಕುಟ್ಟಡ .ಎ ಗಣಪತಿ ಇವರ ನಿಧನಕ್ಕೆ “ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ” ಸಂತಾಪ ವ್ಯಕ್ತಪಡಿಸಿದೆ.








