ಮಡಿಕೇರಿ ಆ.31 : ದಿನದಿಂದ ದಿನಕ್ಕೆ ಮಡಿಕೇರಿ ನಗರ ಬೆಳೆಯುತ್ತಿದೆ, ಆದರೆ ನಗರಸಭೆಯಲ್ಲಿ 165 ಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ನಗರದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹುದ್ದೆಗಳ ಭರ್ತಿಗೆ ಸರ್ಕಾರದ ಮೊರೆ ಹೋಗಲು ನಗರಸಭೆಯ ಸಾಮಾನ್ಯ ಸಭೆ ನಿರ್ಧರಿಸಿದೆ.
ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಖಾಲಿ ಹುದ್ದೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿರುವ ಕುರಿತು ವಿಷಯ ಪ್ರಸ್ತಾಪವಾಯಿತು. ತ್ವರಿತವಾಗಿ ಹುದ್ದೆಗಳು ಭರ್ತಿಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು ಎಂದು ಸದಸ್ಯರು ಗಮನ ಸೆಳೆದಾಗ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ಕಾರದ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಕಳೆದ ಸಭೆಯ ನಡಾವಳಿಗಳನ್ನು ಓದಿ ಅನುಮೋದಿಸುವ ಹಂತದಲ್ಲಿ, ನಗರ ವ್ಯಾಪ್ತಿಯ ಪ್ರತಿ ಮನೆಯ ಆಸ್ತಿಯ ವಿವರಗಳನ್ನು ದಾಖಲು ಮಾಡುವ ಸರ್ವೆ ಕಾರ್ಯಕ್ಕೆ ತಲಾ 50 ರೂ. ನಿಗಧಿಪಡಿಸಿರುವ ವಿಚಾರವನ್ನು ಸದಸ್ಯ ಮನ್ಸೂರ್ ಪ್ರಸ್ತಾಪಿಸಿದರು.
ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಸರ್ಕಾರದ ಮಾನದಂಡದಂತೆ ಪ್ರತಿ ಮನೆಯಿಂದ 30 ರೂ. ಸಂಗ್ರಹಿಸಬೇಕಾಗಿದೆ. ಆದರೆ, ಸರ್ವೆ ಕಾರ್ಯ ನಡೆಸಲು ಆಗಮಿಸಿದ್ದ ಹೆಚ್.ಡಿ ಕೋಟೆ ಸಂಸ್ಥೆ ಈ ಮೊತ್ತಕ್ಕೆ ಒಪ್ಪದೆ ಹಿಂತೆರಳಿದೆ. ಈ ಕಾರಣಕ್ಕಾಗಿ ಇದೀಗ 50 ರೂ. ನಿಗಧಿ ಪಡಿಸಲಾಗಿದೆ. ಆದರೆ ಸರ್ವೆ ಕಾರ್ಯಕ್ಕೆ ಯಾರೂ ಮುಂದೆ ಬಂದಿಲ್ಲವೆಂದು ಹೇಳಿದರು.
ನಗರಸಭೆಯ ಸಿಬ್ಬಂದಿಗಳಿಂದ ಈ ಕಾರ್ಯ ಸಾಧ್ಯವಾಗಲಾರದೆ ಎನ್ನುವ ಸದಸ್ಯರ ಪ್ರಶ್ನೆಯ ಸಂದರ್ಭ ಅಧ್ಯಕ್ಷರು ಉತ್ತರಿಸಿ ನಗರಸಭೆಯಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗದೆ ಸಮಸ್ಯೆಯಾಗಿದೆ. ಇರುವ ಕೆಲವೇ ಸಿಬ್ಬಂದಿಗಳು ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾದ ಒತ್ತಡವಿದೆ ಎಂದರು.
ನಗರಸಭಾ ಕಾರ್ಯದರ್ಶಿ ತಾಹಿರ್ ಮಾತನಾಡಿ ಇರುವ ಸಿಬ್ಬಂದಿಗಳು ಹೆಚ್ಚಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಒತ್ತಡ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ ಈ ಬಗ್ಗೆ ಶಾಸಕರು, ಸರ್ಕಾರಕ್ಕೆ ಮಾಹಿತಿ ನೀಡಿ, ಖಾಲಿ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈಗಾಗಲೆ ಶಾಸಕರಿಗೆ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಮಾತನಾಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿರೋಧ ಪಕ್ಷಗಳ ಜವಾಬ್ದಾರಿಯೂ ಇದೆ. ಶಾಸಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಸರ್ಕಾರದ ಮೂಲಕ ಖಾಲಿ ಹುದ್ದೆ ಭರ್ತಿಗೆ ಮುಂದಾಗುವಂತೆ ಹೇಳಿದರು.
ಈ ಹೇಳಿಕೆ ಕಾವೇರಿದ ಚರ್ಚೆಗೆ ಅವಕಾಶ ಕಲ್ಪಿಸಿತು. ಎಸ್‍ಡಿಪಿಐ ಸದಸ್ಯ ಮನ್ಸೂರ್ ಮಾತನಾಡಿ ಈ ಹಿಂದೆ ನಿಮ್ಮದೇ ಶಾಸಕರು, ಸರ್ಕಾರ ಇದ್ದಾಗ ಈ ಕೆಲಸ ಮಾಡಲಿಲ್ಲವಲ್ಲ ಎಂದು ತಿರುಗೇಟು ನೀಡಿದರು.
ನಗರಸಭೆಯಲ್ಲಿ ಆರೋಗ್ಯ ಪರಿವೀಕ್ಷಕರು, ಸರ್ವೆಯರ್‍ಗಳು ಹೀಗೆ ಪ್ರಮುಖ ಹುದ್ದೆಗಳಲ್ಲಿ ಇರುವವರು ವರ್ಗಾವಣೆಯಾಗಿ ಹೋಗುತ್ತಾರೆ, ಇಲ್ಲವೆ ಆರೋಗ್ಯ ಸಮಸ್ಯೆಯಿಂದ ರಜೆಯಲ್ಲಿರುತ್ತಾರೆ. ಅಗತ್ಯ ಕೆಲಸ ಕಾರ್ಯಗಳು ಸಿಬ್ಬಂದಿಗಳ ಕೊರತೆಯಿಂದ ನಡೆಯುತ್ತಿಲ್ಲ ಎಂದಾದರೆ ನಗರಸಭೆಗೆ ಒಂದು ‘ತಾಯಿತ ಕಟ್ಟಬೇಕು’ ಎಂದು ಹೇಳಿದರು.
ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಲು, ಸರ್ವ ಪಕ್ಷಗಳ ಸದಸ್ಯರ ನಿಯೋಗ ತೆರಳುವ ಸಲಹೆ ನೀಡಿದರು. ಇದಕ್ಕೆ ಸಭೆ ಅನುಮೋದನೆ ನೀಡಿತು.
::: ಬೀದಿ ನಾಯಿಗಳ ಕಾಟ :::
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಸದಸ್ಯ ಅಮಿನ್ ಮೊಹಿಸಿನ್ ಪ್ರಸ್ತಾಪಿಸಿದರು.
ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿದರು ಮತ್ತೆ ಅವುಗಳ ಸಂಖ್ಯೆ ಹೆಚ್ಚಾಗಿದೆ ಎಂದರು. ನಾಯಿಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಗಮನ ಸೆಳೆದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಮಾತನಾಡಿ ನಗರದ ಮಾರುಕಟ್ಟೆ ಆವರಣದಲ್ಲಿ ಟೆಂಡರ್ ನಿಂದ ಪಡೆದ ಮೀನು, ಕೋಳಿ, ಕುರಿ ಮಾಂಸದ ಮಳಿಗೆಗಳಿವೆ. ಆದರೆ ಬೀದಿ ಬೀದಿಗಳಲ್ಲಿ ಮೀನು, ಕೋಳಿ ಮಳಿಗೆಗಳಿದ್ದು, ಇವುಗಳಿಂದಲೇ ನಾಯಿಗಳ ಉಪಟಳ ಹೆಚ್ಚಾಗಿದೆ. ಇಂತಹ ಮಳಿಗೆ ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು.
ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*