ಸುಂಟಿಕೊಪ್ಪ ಸೆ.1 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಹೋದರ-ಸಹೋದರಿ ಸಂಕೇತವನ್ನು ಸಾರುವ ರಕ್ಷಾ ಬಂಧನ ಆಚರಿಸಲಾಯಿತು.
ಜಿಲ್ಲಾ ಸಾಮರಸ್ಯ ವೇದಿಕೆಯ ಪ್ರಮುಖರಾದ ಡಿ.ನರಸಿಂಹ ಮಾತನಾಡಿ, ರಕ್ಷಾ ಬಂಧನದ ಮಹತ್ವತೆಯ ಬಗ್ಗೆ ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ರಕ್ಷಾ ಬಂಧನವನ್ನು ಪರಸ್ಪರ ಕಟ್ಟಿಕೊಳ್ಳುವ ಮೂಲಕ ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ತಾಲೂಕು ಕಾಲೇಜು ಪ್ರಮುಖ ವೇಲು ಮುರುಗನ್, ಮುಖ್ಯ ಶಿಕ್ಷಕ ರಾಹುಲ್, ಶಾಖಾ ಕಾರ್ಯ ವಾಹಕ ವಿಜಯ್, ರಾಖೇಶ್, ಇತರರು ಹಾಜರಿದ್ದರು.







