ಮಡಿಕೇರಿ ಸೆ.6 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಗೆ ರೋವರ್ ಅಂಡ್ ರೇಂಜರ್ ವಿಭಾಗದ ಸಹಾಯಕ ಜಿಲ್ಲಾ ಆಯುಕ್ತರಾಗಿ ಮಂದೆಯಂಡ ಎನ್.ವನಿತ್ ಕುಮಾರ್ ನೇಮಕಗೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ರೋವರ್ ಲೀಡರ್ ಆಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ನಡೆಸಿದ ಸೇವೆ ಹಾಗೂ ರೋವರ್ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯಲ್ಲಿ ತೊಡಗುವಂತೆ ಮಾಡಿ 8 ರೋವರ್ಸ್‍ಗಳಿಗೆ ರಾಜ್ಯ ಪುರಸ್ಕಾರ ದೊರೆಯುವಂತೆ ಮಾಡಿದ ವನಿತ್ ಕುಮಾರ್ ಅವರನ್ನು ಸಹಾಯಕ ಆಯುಕ್ತರಾಗಿ ಕರ್ನಾಟಕ ರಾಜ್ಯ ಸಂಸ್ಥೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರಧಾನ ಆಯುಕ್ತರಾದ ಬೇಬಿ ಮ್ಯಾಥ್ಯೂ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಬೊಳ್ಳಜಿರ ಬಿ ಅಯ್ಯಪ್ಪ ಆದೇಶ ಪ್ರತಿ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟಕರಾದ ದಮಯಂತಿ ಉಪಸ್ಥಿತರಿದ್ದರು.









