ಮಡಿಕೇರಿ ಸೆ.7 : ನಗರದ ಬ್ರಹ್ಮಕುಮಾರಿಸ್ ಲೈಟ್‍ಹೌಸ್ ಸಭಾಂಗಣದಲ್ಲಿ ಪಾವನ ಪರ್ವ ರಕ್ಷಾಬಂಧನದನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಶ್ರೀಮತಿ ರಾಣಿ ಮಾಚಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ರಹ್ಮಾಕುಮಾರಿ ಧನಲಕ್ಷ್ಮಿ ಜಿ ರಕ್ಷಾ ಬಂಧನದ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿದರು.
ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯಿತ್ರಿಜೀ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಸಹೋದರ ಸಹೋದರಿಯರಿಗೆ ಶ್ರೀರಕ್ಷೆಯನ್ನು ಕಟ್ಟಿ, ಹಣೆಗೆ ಶ್ರೀಗಂಧವನ್ನಿಟ್ಟು ವರದಾನಗಳನ್ನು ನೀಡಿ ಸರ್ವರಿಗೂ ಶುಭ ಕೋರಲಾಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರಿಗೆ ಈಶ್ವರೀಯ ಸೇವೆಯ ಮಾಹಿತಿ ನೀಡಿ ಶುಭ ಕೋರಲಾಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ, ವೈದ್ಯಕೀಯ ಕಾಲೇಜು, ಜಿಲ್ಲಾ ಪೋಲೀಸ್ ಕಛೇರಿ, ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾರಾಗೃಹ, ಬ್ಯಾಂಕುಗಳು, ಶಾಲೆಗಳು, ಬಾಲ ಭವನ ಇತ್ಯಾದಿ ಸ್ಥಾನಗಳಲ್ಲಿ ಈಶ್ವರೀಯ ಸಂದೇಶ ನೀಡಿ ಧ್ಯಾನದ ಜಾಗೃತಿ ಮೂಡಿಸಿ ತಮ್ಮ ನಿಶ್ಯಕ್ತತೆಗಳನ್ನು ದೂರ ಮಾಡಿಕೊಳ್ಳುವ ಸಹಜ ಸಾಧನ ಧ್ಯಾನವೆಂಬ ಅನುಭೂತಿ ಮಾಡಿಸಲಾಯಿತು.
ನಗರದಾದ್ಯಂತ ಅನೇಕ ಸ್ಥಾನಗಳಲ್ಲಿ ಭ್ರಾತೃತ್ವದ ಜಾಗೃತಿ ಮೂಡಿಸುವ ಈ ಶ್ರೀರಕ್ಷೆಯನ್ನು ಅನೇಕರಿಗೆ ಬಂಧಿಸಲಾಯಿತು.