ಮಡಿಕೇರಿ ಸೆ.7 : ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಅಪರೂಪದ ಬಿಳಿ ಕಡವೆ ಪತ್ತೆಯಾಗಿದೆ. ವನ್ಯಜೀವಿ ತಜ್ಞರು ಅಳವಡಿಸಿರುವ ಕ್ಯಾಮರಾದಲ್ಲಿ ಚಿತ್ರ ಸೆರೆಯಾಗಿದೆ.
ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಚಿರತೆಯ ಬಗ್ಗೆ ಅಧ್ಯಯನ ನಡೆಸಲು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹಾಗೂ ಬಳಗ ಕ್ಯಾಮರಾ ಅಳವಡಿಸಿದ್ದರು. ಈ ಕ್ಯಾಮೆರಾಗಳಲ್ಲಿ ಬಿಳಿ ಕಡವೆಯ ಚಲನ-ವಲನದ ದೃಶ್ಯ ಸೆರೆಯಾಗಿದೆ.
2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬಿಳಿ ಕಡವೆ ಪತ್ತೆಯಾಗಿತ್ತು. ಅದಾದ ಬಳಿಕ ಇದೀಗ ಕಾವೇರಿ ವನ್ಯಜೀವಿ ವಲಯದಲ್ಲಿ ಕಂಡು ಬಂದಿದೆ. ಇದೇ ಅರಣ್ಯದಲ್ಲಿ ಬಿಳಿನವಿಲು ಕೂಡ ಇರುವುದನ್ನು ಅರಣ್ಯ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿದ್ದರು.










