ಮಡಿಕೇರಿ ಸೆ.7 : ಎರಡು ಗಂಡಾನೆಗಳ ನಡುವೆ ಕಾದಾಟ ನಡೆದು 19 ವರ್ಷದ ಒಂದು ಕಾಡಾನೆ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಸಮೀಪದ ಮಾಕಳಿ ಅರಣ್ಯದಲ್ಲಿ ನಡೆದಿದೆ.
ದೊಡ್ಡಮಾಕಳಿ ಅರಣ್ಯ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೀಟ್ ಗೆ ಹೋಗಿದ್ದ ಸಂದರ್ಭ ಆನೆ ಮೃತಪಟ್ಟಿರುವುದು ಕಂಡು ಬಂದಿದೆ. ಮೃತಪಟ್ಟ ಆನೆಯ ಹೊಟ್ಟೆ ಮತ್ತು ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳ ಚೀರಾಟ ಅತಿಯಾಗಿತ್ತು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.










