ಮಡಿಕೇರಿ ಸೆ.9 : ಫೆಡರೇಶನ್ ಆಫ್ ಕೊಡವ ಸಮಾಜದ ವತಿಯಿಂದ ಕೈಲ್‍ಪೊಳ್ದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಾಳುಗೋಡು ಕೊಡವ ಸಮಾಜದಲ್ಲಿ ಕೊಡವ ಸಾಂಪ್ರಾದಯಿಕ ಆಯುಧ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಮಾಡಲಾಯಿತು. ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಬಾರದ ಗುಂಡು ಎಸೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಪೊಮ್ಮಕ್ಕಡ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರು ಹಬ್ಬಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟರು. ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಪೊಮ್ಮಕ್ಕಡ ವಿಭಾಗದ ಬಲ್ಲಣಮಾಡ ರೀಟಾ ದೇಚಮ್ಮ, ಪ್ರಮುಖರಾದ ಕಂಬೀರಂಡ ಕಿಟ್ಟು ಕಾಳಪ್ಪ, ಕೋಟೇರ ರಘು, ಬೊಳಿಯಂಗಡ ದಾದೂ ಪೂವಯ್ಯ ಮತ್ತಿತರರು ಉಪಸ್ಥಿತರಿದ್ದರು.
::: ಬಹುಮಾನ ವಿತರಣೆ :::
.22 ಕೋವಿ ಸ್ಪರ್ಧೆಯಲ್ಲಿ ಕಬ್ಬಟ್ಟೀರ ಶರತ್ ಪ್ರಥಮ, ಕೇಲೇಟಿರ ಪವಿತ್ ದ್ವಿತೀಯ ಹಾಗೂ ಅಚ್ಚಪಂಡ ಪಟ್ಟು ತೃತೀಯ ಬಹುಮಾನ ಪಡೆದುಕೊಂಡರು. ಬಕೆಟ್‍ಗೆ ಬಾಲು ಎಸೆಯುವ ಸ್ಪರ್ಧೆಯಲ್ಲಿ ಅಪ್ಪುಮಣಿಯಂಡ ಬಜನ್ ಪ್ರಥಮ ಹಾಗೂ ಕಾಳಿಮಾಡ ಮೋಟಯ್ಯ ದ್ವಿತೀಯ ಬಹುಮಾನ ಗಳಿಸಿದರು.
ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಅಪ್ಪುಮಣಿಯಂಡ ಬಜನ್ ಪ್ರಥಮ, ಕೇಲೇಟಿರ ಪವಿತ ದ್ವಿತೀಯ ಹಾಗೂ ಪುದಿಯೊಕ್ಕಡ ಪೂರ್ಣ ತೃತೀಯ ಬಹುಮಾನ ಪಡೆದರು.









