ಮಡಿಕೇರಿ ಸೆ.11 : ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪ್ರಮುಖ ಡಾ.ಸೈಯದ್ ನಾಸಿರ್ ಹುಸೇನ್ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕ ಮತ್ತು ಅಲ್ಪಸಂಖ್ಯಾತರ ಘಟಕ ಸನ್ಮಾನಿಸಿ ಗೌರವಿಸಿತು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್, ಪ್ರಮುಖರಾದ ಯಾಕುಬ್, ಲತೀಫ್, ರಶೀದ್, ಶೌಕತ್, ಜುಬೈರ್, ರಫೀಕ್ ಹಾಗೂ ಬಾಷಾ ಅವರುಗಳು ಬೆಂಗಳೂರಿನಲ್ಲಿ ಡಾ.ಸೈಯದ್ ನಾಸಿರ್ ಹುಸೇನ್ ಅವರನ್ನು ಭೇಟಿಯಾಗಿ ಅಭಿನಂದಿಸಿ ಶುಭ ಹಾರೈಸಿದರು.









