ವಿರಾಜಪೇಟೆ ಸೆ.16 : ವಿರಾಜಪೇಟೆ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ “ನನ್ನ ಮಣ್ಣು ನನ್ನ ದೇಶ ” ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿ ಸಿ.ಎಂ.ಸೋಮಣ್ಣ, ಬಿ.ಯು. ಅಂಬಿಕಾ, ನೇಚರ್ ಕ್ಲಬ್ ಸದಸ್ಯರಾದ ಅನುಪಮ ಸಿ.ಪಿ., ಹೆಚ್ ವಿ. ನಾಗರಾಜು ಇದ್ದರು.









