ನಾಪೋಕ್ಲು ಸೆ.30 : ವಿದ್ಯಾರ್ಥಿಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ದೇಶದ ಆಸ್ತಿಯಾಗಲು ಸಾಧ್ಯ ಎಂದು ಅರವೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅರಮೇರಿಯ ಎಸ್ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಂತರ ಕಾಲೇಜು ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್ಎಂಎಸ್ ಕಾಲೇಜಿನ ಪ್ರಾಂಶುಪಾಲ ಬಲ್ಲಚಂಡ ಕುಸುಮ್ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಸಚಿನ್, ಪ್ರಾಂಶುಪಾಲ ವಾಟೀರಿರ ಸಪ್ನ ಸುಬ್ಬಯ್ಯ, ಉಪನ್ಯಾಸಕ , ಸಿಬ್ಬಂದಿ ವೃಂದದವರು ಪಾಲ್ಗೊಂಡಿದ್ದರು.
ಸರ್ವೋದೈವತಾ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಪ್ರಥಮ ಬಹುಮಾನವನ್ನು ಪಡೆದುಕೊಂಡಿತು. ಬಾಲಕರ ದ್ವಿತೀಯ ಸ್ಥಾನವನ್ನು ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಹಾಗೂ ಬಾಲಕಿಯರ ದ್ವಿತೀಯ ಸ್ಥಾನವನ್ನು ಪೊನ್ನಂಪೇಟೆಯ ಅಂತೋನಿ ಕಾಲೇಜು ತಂಡ ಪಡೆದುಕೊಂಡರು.
ಅಂತರ ಕಾಲೇಜು ಥ್ರೋಬಾಲ್ ಪಂದ್ಯಾವಳಿಯಲ್ಲಿ 500ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ