ಮಡಿಕೇರಿ ಅ.2 : ಮಾಯಮುಡಿ ಕೋಲುಬಾಣೆ ಕಾವೇರಿ ಅಸೋಸಿಯೇಷನ್ ವತಿಯಿಂದ ಕೈಲ್‍ಪೋಳ್ದ್ ಹಬ್ಬದ ಪ್ರಯುಕ್ತ ವಿವಿಧ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.
ಕಾಫಿ ಬೆಳೆಗಾರ ಕಾಳಪಂಡ ಸಿ.ಸುಧೀರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಮತ್ತು ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
::: ಸ್ಪರ್ಧಾ ವಿಜೇತರು :::
.22 ತೆಂಗಿನ ಕಾಯಿಗೆ ಗುಂಡು ಒಡೆಯುವ ಸ್ಪರ್ಧೆಯಲ್ಲಿ ಚೆಪ್ಪುಡೀರ ದರ್ಶನ್ ಬೆಳ್ಯಪ್ಪ ಪ್ರಥಮ, ಆಪಟ್ಟೀರ ಸಿ.ಪ್ರದೀಪ್ ದ್ವಿತೀಯ, ಆಪಟ್ಟೀರ ಆರ್.ಅಯ್ಯಪ್ಪ ತೃತೀಯ ಬಹುಮಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಆಪಟ್ಟೀರ ಸಿ.ಪೌನಿ ಗೌರಮ್ಮ ಪ್ರಥಮ, ಆಪಟ್ಟೀರ ಜಸ್ಮಿ ಬೋಪಣ್ಣ ದ್ವಿತೀಯ, ಚೆರಿಯಪಂಡ ಡಾಟಿ ಪೂವಣ್ಣ ತೃತೀಯ ಬಹುಮಾನ ಗಳಿಸಿದರು.
ಬಕೆಟ್‍ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಪುಚ್ಚಿಮಾಡ ಶಿಲ್ಪ ರಾಯ್ ಪ್ರಥಮ, ಚೆಪ್ಪುಡಿರ ಮಾನ್ಯ ಪೂವಯ್ಯ ದ್ವಿತೀಯ, ಆಪಟ್ಟೀರ ಸಿ.ಪೌನಿ ಗೌರಮ್ಮ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ನ ಕ್ರೀಡಾ ಕಾರ್ಯದರ್ಶಿ ಆಪಟ್ಟೀರ ಟಾಟು ಮೊಣ್ಣಪ್ಪ, ಉಪಾಧ್ಯಕ್ಷ ನಾಮೇರ ರವಿ ದೇವಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸುರೇಶ್, ಖಜಾಂಚಿ ಕಾಳಪಂಡ ಸಿ.ನರೇಂದ್ರ, ನಿರ್ದೇಶಕರಾದ ಆಪಟ್ಟೀರ ಎ.ಬೋಪಣ್ಣ, ಎಸ್.ವಿ.ಮಂಜುನಾಥ್, ಜೆ.ಎಸ್.ಲೋಕೇಶ್, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.











