ಮೂರ್ನಾಡು ಅ.2 : ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ‘ಸ್ವಚ್ಛತೆಯೇ ಸೇವೆ’ ಅಭಿಯಾನ ನಡೆಯಿತು.
ಮೂರ್ನಾಡುವಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಶ್ರೀ ರಾಮಮಂದಿರ ಸೇವಾ ಸಮಿತಿ ಗಾಂಧಿನಗರ ಹಾಗೂ ಕಾಂತೂರು ಮೂರ್ನಾಡು ಗ್ರಾ.ಪಂ ಜಂಟಿ ಆಶ್ರಯದಲ್ಲಿ ಮೂರ್ನಾಡು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ರಸ್ತೆ, ಆರೋಗ್ಯ ಕೇಂದ್ರ ಸುತ್ತಮುತ್ತ, ಆರೋಗ್ಯ ಕೇಂದ್ರದ ವಸತಿ ನಿಲಯ ಹಾಗೂ ನಾಪೋಕ್ಲು ರಸ್ತೆ ಈ ಭಾಗದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು.








